ಸಂಗೀತಗಾರ ಪಂಡಿತ ತಾರಾನಾಥರ ಅಸಮಗ್ರ ಲೇಖನಗಳನ್ನು ಸಂಗ್ರಹಿಸಿ, ಸಂಪಾದಿಸಿ ’ಅಂಟಿದ ನಂಟು’ ಎಂಬ ಕೃತಿಯ ಮೂಲಕ ಎಂ. ಧ್ರುವನಾರಾಯಣ ಮತ್ತು ಕಿ.ರಂ. ನಾಗರಾಜ ಅವರು ಪ್ರಕಟಿಸಿದ್ದಾರೆ.
ಸ್ವಧರ್ಮ, ಧರ್ಮ ಸಂಭವ, ಧರ್ಮದ ಮೂಲ ತತ್ವ್ತಗಳು, ಮತವೋ ಸತ್ಯವೋ, ದೇವರ ಮೊದಲು ತೊದಲು, ಅತಿ ಆಸೆ ಗತಿಗೇಡು, ನಿಸರ್ಗ ಮತ್ತು ಕೃತ್ರಿಮತೆ, ಅಧೋಗತಿ, ಸಹಜ ಸಮರಸ, ಧರ್ಮವೂ ಸಂತಾನಶಾಸ್ತ್ರವೂ, ವಿಗ್ರಹಾರಾಧನೆ, ಪೂಜ್ಯತೆ !, ಧಾರ್ಮಿಕ ದುರಾಚಾರ, ನೀತಿ-ಪ್ರೀತಿ-ಭೀತಿ, ಆಚಾರ, ಪ್ರಾರ್ಥನೆ, ಹೋಲಿಯ ಹಬ್ಬವು, ಹಿಂದೂ-ಮುಸಲ್ಮಾನರು, ಶ್ರಾಧ್ಧ, ಮುಖಾಮುಖಿ, ಸ್ವಹಿತ, ಜಗಳ, ಜೀವನದ ಸಾರವೆಲ್ಲಿದೆ?, ಕುಟುಂಬ ಜೀವನ, ಆರ್ಯರ ನೇಯ್ಗೆಯ ವ್ಯವಸಾಯ, ದಾಂಪತ್ಯ ದರ್ಶನ, ಶಿಕ್ಷಣದ ಬಗ್ಗೆ ಕೆಲವು ವಿಚಾರಗಳು, ಅದ್ಬುತ ಸಾಹಸ, ಮರುಭೂಮಿ ಸಾಗರಗಳ ಸಂದೇಶ, ಮಕ್ಕಳನ್ನುಕುರಿತು, ವಿದ್ಯಾರ್ಥಿಯೊಬ್ಬನ ಪತ್ರಕ್ಕೆ ಬರೆದ ಉತ್ತರ, ಕರ್ನಾಟಕದ ಏಕೀಕರಣ, ಸುಲಭ ತೀರ್ಮಾನವಲ್ಲ – ಕಠಿಣ ಸಮಸ್ಯೆ, ಸತ್ತರೆಂದು ಅತ್ತು ತೋರಿಸಬೇಕೇ?, ಹಿಂದೂಸ್ಥಾನದ ವೀರ ಜಾತಿಗಳು, ಮರಣ ತಾಂಡವ, ಇದಾವ ಸಂತುಷ್ಟಿ? ಮುಂತಾದ ಲೇಖನಗಳು ಈ ಕೃತಿಯಲ್ಲಿದೆ.
ಹಿರಿಯ ವಿದ್ವಾಂಸ ಎಂ. ಧ್ರುವನಾರಾಯಣ ಅವರು ಜನಿಸಿದ್ದು ನಾರಾಯಣದೇವರಕೆರೆಯಲ್ಲಿ. ರಾಯಚೂರಿನ ಪಂಡಿತ್ ತಾರಾನಾಥ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ. ಜೀವನ ಚರಿತ್ರೆ ಅನುವಾದ ಕ್ಷೇತ್ರಗಳಲ್ಲದೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ. ರಾವ್ ಬಹದ್ದೂರ್, ಪಂಡಿತ ತಾರಾನಾಥ, ಹನುಮಂತಗೌಡ (ಜೀವನ ಚರಿತ್ರೆ), ಡಾ. ಬಾಬಾ ಸಾಹೇಬ ಅಂಬೇಡ್ಕರರ ಬರಹಗಳು, ವಿಜಯನಗರ ಕಾಲದಲ್ಲಿನ ನೀರಾವರಿ ವ್ಯವಸ್ಥೆ (ಅನುವಾದ), ಭಾರತದ ಸಂವಿಧಾನ, ರಾಜ್ಯ ಶಾಸ್ತ್ರ ಮೀಮಾಂಸಕರು, ಸಾರ್ವಜನಿಕ ಆಡಳಿತ (ಪಠ್ಯ ಪುಸ್ತಕಗಳು). ಪಂಡಿತ್ ತಾರಾನಾಥ ಅವರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಹಿರಿಮೆ ಅವರದು. ...
READ MORE