ನಾಡು ಕಂಡ ಅಪರೂಪದ ರಾಜಕಾರಣಿ ಎ.ಕೆ. ಸುಬ್ಬಯ್ಯನವರ ಶಾಸನಸಭೆಯ ಭಾಷಣ ಮತ್ತು ಚರ್ಚೆಯ ಪುಸ್ತಕ ರೂಪ ’ನುಡಿಯೆಂಬುದು ಉರಿವ ಕೆಂಡ’. ಪ್ರಾಮಾಣಿಕತೆಯ ಮತ್ತೊಂದು ಹೆಸರಾದ ಇವರು ಸದನದಲ್ಲಿ ನಿಂತರು ಎಂದರೆ ಗುಡುಗು-ಸಿಡಿಲು ಕಟ್ಟಿಟ್ಟ ಬುತ್ತಿ. ತಮ್ಮ ನಿಷ್ಠುರ ನಿಲುವಿನ ಕಾರಣಕ್ಕಾಗಿಯೇ ಪ್ರಸ್ತುತ ರಾಜಕಾರಣಕ್ಕೆ ಅಪವಾದದಂತೆಯೂ ಇದ್ದಾರೆ. ಅವರು ಖಂಡತುಂಡವಾದ ಮಾತಿನ ತುಣುಕೊಂದು ಹೀಗಿದೆ:
"ಸರ್ಕಾರ ನಡೆಸಿದ ನಂತರವೂ ಜನರ ಸುಧಾರಣೆಯಾಗಿಲ್ಲ ಅಂದರೆ ಅದಕ್ಕೆ ಅಧಿಕಾರದಲ್ಲಿ ಇದ್ದವರೇ ಕಾರಣ ಹೊರತು ಬೇರೆ ಯಾರೂ ಅಲ್ಲ. ಈ ಹಣ ಜನರಿಗೆ ಮುಟ್ಟಿದ್ದರೆ ಅವರ ಜೀವನ ಈ ರೀತಿ ಇರಬೇಕಾದ ಅವಶ್ಯಕತೆ ಇರಲಿಲ್ಲ. ಅವರಿಗೆ ಮೋಸ ಮಾಡಿ, ಅವರ ಆಹ್ವಾನದ ದುರುಪಯೋಗ ಪಡೆದು, ಅವರ ಬಲಹೀನತೆಯ ದುರುಪಯೋಗ ಮಾಡಿ, ಪ್ರತಿಭಟನೆ ಮಾಡುವುದಕ್ಕೆ ಸಾಧ್ಯವಾಗಿಲ್ಲದವರ ಅನುಕೂಲ ಪಡೆದು ಅಧಿಕಾರ ಮಾಡಿದ ಜನ ಪಟ್ಟಭದ್ರ ಹಿತಾಸಕ್ತಿಗಳ ದೃಷ್ಟಿಯಿಂದ ಅವರಿಂದ ಓಟ್ ತೆಗೆದುಕೊಳ್ಳಕ್ಕೆ ಎಷ್ಟು ಬೇಕೋ ಅಷ್ಟು ಕಾರ್ಯಕ್ರಮ ಬಿಟ್ಟರೆ ನಿಖರವಾಗಿಯೂ ಇವರ ಸುಧಾರಣೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ"
ಸುಬ್ಬಯ್ಯನವರ ಪಾಂಡಿತ್ಯವನ್ನೂ, ಜನಪರತೆಯನ್ನೂ ನೇರವಾಗಿ ಅರಿಯಲು ಸಾಧನವಾಗಬಲ್ಲ ಕೃತಿ ಇದು.
©2024 Book Brahma Private Limited.