ಕವಿ ದ.ರಾ. ಬೇಂದ್ರೆ ಕವಿತೆಗಳಿಗೆ ಹಿಡಿದ ಕನ್ನಡಿ ’ಬೇಂದ್ರೆ ಕಾವ್ಯ ಮೀಮಾಂಸೆ’ ಕೃತಿ.ಯನ್ನು ವಿಮರ್ಶಕ, ಸಾಹಿತಿ ಶಂಕರ್ ಮೊಕಾಶಿ ಪುಣೇಕರ್ ಅವರು ರಚಿಸಿದ್ದಾರೆ.
1962 ರಲ್ಲಿ ಪ್ರಕಟಿಸಿದ ಹೊತ್ತಿಗೆಯನ್ನು ಕೆಲವು ಲೇಖನಗಳ ಜೊತೆಗೆ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಇಲ್ಲಿನ ಪ್ರಬಂಧಗಳ ಸಾಮಾನ್ಯಗುಣವೆಂದರೆ ಇವು ಯಾವುವೂ ನವ್ಯ ವಿಮರ್ಶೆಗಳಲ್ಲ ಒಂದೇ ಕವನದ ವಿಶ್ಲೇಷಣೆಯಲ್ಲೂ ನವ್ಯ ವಿಮರ್ಶೆಯ ಇತಿಮಿತಿಗೆ ಬದ್ಧವಾಗಿಲ್ಲ. ವಿಸ್ತಾರವಾದ ಹಿನ್ನೆಲೆಯಲ್ಲಿ ಆಯಾ ಕವನಗಳ ವೈಶಿಷ್ಟ್ಯವನ್ನು ತೋರ್ಪಡಿಸಲಾಗಿದೆ.
ಕವಿಯ ಉದ್ದೇಶವನ್ನೇ ತಿಳಿದುಕೊಳ್ಳದೆ ಕಾವ್ಯ ಓದುವುದು, ನವ್ಯ ವಿಮರ್ಶೆಯ ತಾತ್ವಿಕ ಚಟ. ಕೃತಿಯನ್ನಷ್ಟೇ ಓದಿದರೆ ಸಾಲದು. ಕೃತಿಯೊಂದೇ ಸಾಮಗ್ರಿಯಲ್ಲ. ನವ್ಯರು ಕವಿಯ ಉದ್ದೇಶದ ಬಗ್ಗೆ ಬರೆಯುವುದು ಅಪ್ರಸ್ತುತವೆಂದು ಬರೆಯುತ್ತಾರೆ. ಇಂಥ ಬಂಧನಗಳಿಗೆ ವಿದಾಯ ಹೇಳುವುದು ತೌಲನಿಕ ಅಧ್ಯಯನದ ಉದ್ದೇಶ, ಇಂಥ ತೌಲನಿಕ ಅಧ್ಯಯನದ ಬರಹಗಳು ಈ ಹೊತ್ತಿಗೆಯ ಹೂರಣವೆಂದೇ ಹೇಳಬಹುದು.
ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್ ...
READ MORE