ಬೇರು-ಕಾಂಡ ಮತ್ತು ಚಿಗುರು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಕೆ.ವಿ. ನಾರಾಯಣ ಅವರ ಪುಸ್ತಕವನ್ನು ’ಇದುವರೆಗಿನ ಬರೆಹಗಳು’ ಸರಣಿಯ ’ತೊಂಡುಮೇವು’ನಲ್ಲಿ ಎರಡನೆಯ ಕಂತೆಯಾಗಿ ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯವನ್ನು ಕುರಿತ ಲೇಖನಗಳು ಈ ಸಂಪುಟದಲ್ಲಿವೆ. ಸಾಹಿತ್ಯ ಚರಿತ್ರೆ, ಪ್ರಾಚೀನ ಸಾಹಿತ್ಯದ ಅಧ್ಯಯನ, ಕವಿರಾಜಮಾರ್ಗ, ಪಂಪ, ಕನಕದಾಸ, ಬಿಎಂಶ್ರೀ, ಗೋವಿಂದ ಪೈ, ವಚನ ಚಳುವಳಿ, ಶೂನ್ಯ ಸಂಪಾದನೆ, ಅಭಿಜ್ಞಾನ ಶಾಕುಂತಲ, ಶಂಬಾ ಜೋಷಿ ಅವರನ್ನ ಕುರಿತ ಲೇಖನಗಳಿವೆ. ಎರಡನೆ ಭಾಗಲದಲ್ಲಿ ಮಲ್ಲಿಕಾ ಘಂಟಿ, ಗೋವಿಂದರಾಜು, ಮೂಲಮಾಧ್ಯಮಿಕಕಾರಿಕ ಸೇರಿದಂತೆ ಹಲವು ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ.
ಕೆ.ವಿ. ನಾರಾಯಣ ಅವರು ಕನ್ನಡದ ಪ್ರಮುಖ ಲೇಖಕರಾದ ಮಾಸ್ತಿ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಶಾಂತಿನಾಥ ದೇಸಾಯಿ ಅವರೊಂದಿಗೆ ನಡೆಸಿದ ಸಂದರ್ಶನಗಳ ಜೊತೆಗೆ ಆಶಾದೇವಿ ಮತ್ತು ಚಲಪತಿ ಅವರು ನಡೆಸಿದ ನಾರಾಯಣ ಅವರ ಸಂದರ್ಶನಗಳನ್ನು ಸೇರಿಸಲಾಗಿದೆ. ಕೊನೆಯ ’ವ್ಯಕ್ತಿಗಳು’ ಭಾಗಲ್ಲಿ ಮಾಸ್ತಿ, ಜಿ.ಎಸ್.ಎಸ್., ಚಿ.ಶ್ರೀನಿವಾಸರಾಜು ಅವರನ್ನು ಕುರಿತ ಲೇಖನಗಳಿವೆ. ಇದೊಂದು ಕನ್ನಡ ಸಾಹಿತ್ಯವನ್ನು ಕುರಿತ ಮಹತ್ವದ ಗ್ರಂಥ.
ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...
READ MORE