‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ-9’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಜಾಗತಿಕ ಕಥನ ಕುರಿತಾದ ಮಿಲನಿಯಂ ಸರಣಿ ಭಾಗ-1 ಕೃತಿಯಾಗಿದೆ. ಐದು ಭಾಗಗಳನ್ನಾಗಿ ಕೃತಿಯನ್ನು ವಿಂಗಡಿಸಲಾಗಿದ್ದು, ಹುಡುಕಾಟ, ಜೀವನ ಸಂಗ್ರಾಮ, ಪೆಸಿಫಿಕ್ ದ್ವೀಪಗಳು, ಚಂದ್ರನ ಚೂರು, ನೆರೆಹೊರೆಯ ಗೆಳೆಯರು, ಅನುಬಂಧಗಳನ್ನು ಇಲ್ಲಿ ಕಾಣಬಹುದು.
ಹುಡುಕಾಟ ವಿಭಾಗದಲ್ಲಿ ಚಿನ್ನದ ಊರು(ಎಲ್ ಡೊರಾಡೋ), ಏಂಜಲ್ ಫಾಲ್ಸ್, ಟೆಪೂ ಎಂದರೇನು?, ಪಿರಮಿಡ್ಡಿನ ಗರ್ಭದಲ್ಲಿ, ಮಚು ಪಿಚು, ಟೊರಾಂಟುಲ, ಫುಟ್ ಬಾಲ್, ಪ್ರಾಕ್ತನ ಶಾಸ್ತ್ರನ ಫಜೀತಿಗಳು, ಗುಹಾ ನಗರಗಳು, ದೈತ್ಯ ಪ್ರತಿಮೆಗಳು ವಿಚಾರಗಳು ಇಲ್ಲಿವೆ. ಜೀವನ ಸಂಗ್ರಾಮ ವಿಭಾಗದಲ್ಲಿ ಅಗ್ನಿಪರ್ವತದ ಸವಾಲು, ಸಾಂಟರೋನಿ, ಅಗ್ನಿಪರ್ವತಗಳ ಅಂತರಂಗ, ಪೆಡ್ರೋ ಎಂಬ ಪೆಲಿಹನ್ ಹಕ್ಕಿ, ಜಗತ್ತನ್ನು ಬೆಚ್ಚಿಸಿದ ಸಂಶೋಧಣೆ, ತ್ಸುನಾಮಿ, ಕೊನೆಯಿರದ ಚಳಿಗಾಲ, ಎಲ್ ನಿನೋ, ಸಹರಾ ವಿಚಾರಗಳನ್ನು ಒಳಗೊಂಡಿದೆ.
ಪೆಸಿಫಿಕ್ ದ್ವೀಪಗಳು ವಿಭಾಗದಲ್ಲಿ ಅಟಾಲ್, ಚಿನ್ನದ ವರಹಗಳು, ನರಭಕ್ಷಕರ ದ್ವೀಪ ಫಿಜಿ, ಅಟಾಲಿನ ಮುತ್ತುಗಳು, ಪಫರ್ ಮೀನು, ಧೀರ ನಾವಿಕರು, ರೈಟೇಯಾ ವಿಚಾರಗಳು ಇಲ್ಲಿವೆ. ಚಂದ್ರನ ಚೂರು ವಿಭಾಗದಲ್ಲಿ ಚಂದ್ರಮುಖ, ಬ್ಯಾರಿಂಜರ್ ಗುಂಡಿ, ಬಾಹ್ಯಾಕಾಶದತ್ತ, ಬಾಹ್ಯಾಕಾಶದ ಅಂಚಿನಿಂದ ಸಂದೇಶ, ರೇಂಜರ್, ಯಂತ್ರಮಾನವ ಸರ್ವೇಯರ್, ಶೂನ್ಯದಲ್ಲಿ ಭೇಟಿ, ಅಪೋಲೋ, ಚಂದ್ರವಾಹನ, ಬೇರೊಂದು ಲೋಕದಲ್ಲಿ ಇಟ್ಟ ಹೆಜ್ಜೆ ಬರಹಗಳು ಇಲ್ಲಿವೆ.
ನೆರೆಹೊರೆಯ ಗೆಳೆಯರು ವಿಭಾಗದಲ್ಲಿ ಕ್ರಿಸ್ಮ್ ಸ್ ದ್ವೀಪದ ಕೆಂಪು ಏಡಿಗಳು, ಆಮೆಗಳ ಸಾಮ್ರಾಜ್ಯ, ಕುಪ್ಪಳಿಸುವ ಕಪ್ಪೆಗಳು, ಮುಬಿಯಾ ತೀರದ ‘ಮಹಾ ಕಪ್ಪೆ’, ಮೂರು ಇರುವೆಗಳು, ಚಿಟ್ಟಳಿಲು, ಕಿಂದರಿಜೋಗಿಗಳು ಮತ್ತು ಇಲಿಗಳು, ಹಾರುವ ಇಲಿಗಳ ಕಾಡು ಬರಹಗಳು ಇಲ್ಲಿವೆ. ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷ, ಕೃತಿ ಸೂಚಿಯನ್ನು ಇಲ್ಲಿ ಕಾಣಬಹುದಾಗಿದೆ.
©2024 Book Brahma Private Limited.