ಡಾ. ಅಂಬೇಡ್ಕರರ ವಿವಿಧ ಅಪ್ರಕಟಿತ ಸಮ್ಮಿಶ್ರ ಲೇಖನಗಳು, ಟಿಪ್ಪಣಿಗಳನ್ನು ಈ ಸಂಪುಟವು ಒಳಗೊಂಡಿದೆ. ಪ್ರಾಚೀನ ಭಾರತದ ವಾಣಿಜ್ಯ, ವ್ಯಾಪಾರ, ಮಧ್ಯಕಾಲೀನ ಭಾರತದ ವಾಣಿಜ್ಯ ಸಂಬಂಧಗಳು, ಪ್ರಭುತ್ವ ಸರ್ಕಾರದ ಮುಂಚಿನ ಭಾರತದ ಸ್ಥಿತಿಗತಿಗಳ ಬಗ್ಗೆ, ದೇಶದ ಸೈನಿಕ ಪಡೆಗಳಲ್ಲಿ ನಿಮ್ನ ವರ್ಗದವರನ್ನು ಸೇರಿಸಿಕೊಳ್ಳದೆ ಕಡೆಗಣಿಸಿದ ಬ್ರಿಟೀಷರ ಆಳ್ವಿಕೆಯ ಕುರಿತು ವಿವರಿಸಲಾಗಿದೆ. ಬ್ರಿಟೀಷರ ಸಂವಿಧಾನದ ವಿವರಗಳು, ಭಾರತದ ಸ್ವಾತಂತ್ರ್ಯಾ ನಂತರ ಸಾರ್ವಭೌಮ ಅಧಿಕಾರಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಸಂಸ್ಥಾನಗಳ ಬೇಡಿಕೆ, ಆಸ್ತಿ, ಸಕ್ಷ್ಯ ಮುಂತಾದ ಕಾಯಿದೆ, ಕಾನೂನುಗಳ ಬಗೆಗಿನ ವಿವರ, ಮನು ಮತ್ತು ಶೂದ್ರರು, ಸಾಮಾಜಿಕ ವ್ಯವಸ್ಥೆಯ ಸಂರಕ್ಷಣೆ, ನಿಮ್ನ ವರ್ಗಗಳ ರಾಜಕೀಯ ದಮನ, ಗುಲಾಮಗಿರಿ ಮತ್ತು ಅಸ್ಪೃಶ್ಯತೆ, ಇವುಗಳ ಮೇಲು ಕೀಳಿನ ಪ್ರಶ್ನೆ ಹೀಗೆ ಪ್ರಮುಖ ವಿಷಯಗಳ ಕುರಿತ ಡಾ. ಅಂಬೇಡ್ಕರರ ಬರಹಗಳನ್ನು ಈ ಕೃತಿಯೂ ಒಳಗೊಂಡಿದೆ.