ಭಾರತದ ಸಂವಿಧಾನ ರಚನೆ, ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಿಸಲು ತೆಗೆದುಕೊಂಡ ನಿರ್ಣಯಗಳು, ಮೂಲಭೂತ ಹಕ್ಕುಗಳ ವರದಿ, ಕೇಂದ್ರ ಸಂವಿಧಾನ ಸಮಿತಿಯ ವರದಿ, ಸಂವಿಧಾನದ ಕರಡು ಪರಿಶೀಲನಾ ಸಮಿತಿಯ ರಚನೆ, ಸಂವಿಧಾನ ಸಭೆಯ ಕಲಾಪಗಳ ವರದಿ, ಗೆಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವಂತೆ ಕರಡು ಸಂವಿಧಾನದ ವಿವರಗಳು ಹಾಗೂ ಒಕ್ಕೂಟ, ಅದರ ಪ್ರದೇಶದ ಗಡಿ, ಪೌರತ್ವ, ಮೂಲಭೂತ ಹಕ್ಕುಗಳು, ರಾಜ್ಯನೀತಿಯ ನಿರ್ದೇಶನ ತತ್ವಗಳು, ಒಕ್ಕೂಟ ಹಾಗೂ ರಾಜ್ಯಗಳ ನಡುವಿನ ಬಾಂಧವ್ಯ, ಹಣಕಾಸು, ಆಸ್ತಿ ದಾವೆ, ಒಪ್ಪಂದ, ಸೇವೆಗಳು, ಚುನಾವಣೆಗಳು, ಅಲ್ಪಸಂಖ್ಯಾತರಿಗೆ ವಿಶೇಷ ಅಂಶಗಳು ಮತ್ತು ಸಂವಿಧಾನದ ಕಲಂ ವಾರು ಚರ್ಚೆಗಳನ್ನು ಈ ಸಂಪುಟವು ಒಳಗೊಂಡಿದೆ. ಈ ಸಂಪುಟವು ಸಂವಿಧಾನ ರಚನಾ ಸಭೆಯಲ್ಲಿನ ನಡವಳಿಗಳ ಮೂಲಕ ಸಂವಿಧಾನದ ವಿವರವಾದ ಚರ್ಚೆ, ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಸಂಪುಟ ಒದಗಿಸುತ್ತದೆ.