ಮುಳ್ಳೂರು ನಾಗರಾಜರ ಸಮಗ್ರ ಸಾಹಿತ್ಯದ ನಾಲ್ಕನೇಯ ಸಂಪುಟದಲ್ಲಿ ಅವರ ಆತ್ಮಕಥೆ ‘ಮಾಮರದ ಮೇಲೊಂದು ಕೋಗಿಲೆ ಭಾಗ-1, ಭಾಗ-2’ ಹಾಗೂ ‘ದಲಿತ ಚಳವಳಿ’ ಕುರಿತ ಬರೆಹಗಳನ್ನು ಒಳಗೊಂಡಿದೆ.
ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯ ಅನುಭವಗಳು, ಕಥನ ಹಾಗೂ ಸಾಹಿತ್ಯಕ ಬರೆಹಗಳು ಇಲ್ಲಿವೆ. ತಾವು ಸಾಗಿ ಬಂದ ಹಾದಿಯಲ್ಲಿ ಹೊಕ್ಕಿದ ಅಡೆತಡೆಗಳನ್ನು ತೊಡೆದುಕೊಂಡ ತಮ್ಮ ಜೀವನ ಯಾನವು ಇಲ್ಲಿ ಅಭಿವ್ಯಕ್ತವಾಗಿದೆ. ಮುಳ್ಳೂರು ನಾಗರಾಜರ ಕೃತಿಗಳನ್ನು ಅಪ್ಪಗೆರೆ ಸೋಮಶೇಖರ್ ಸಂಪಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.
ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ಅಪ್ಪಗೆರೆ ಗ್ರಾಮದ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು 7ನೇ ರಾಂಕ್ ಪಡೆದು ಪಾಸಾದವರು. ’ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ : ಒಂದು ಅಧ್ಯಯನ” ಎಂಬ ವಿಷಯ ಕುಳಿತು ಸಂಶೋಧನೆ ನಡೆಸಿ, 2008ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ (ವಿಮರ್ಶೆ), ಮೌನ ಮಾತು ಪ್ರತಿಭಟನೆ (ವಿಮರ್ಶೆ), ಡಾ. ರಾಜಕುಮಾರ್, ಸುಟ್ಟಾವು ಬೆಳ್ಳಿ ಕಿರಣ (ವಿಮರ್ಶೆ), ತನು ಮುಟ್ಟದ ಮುನ್ನ(ವಿಮರ್ಶೆ), ಸಂಬಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ ...
READ MORE