ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ಅಪ್ಪಗೆರೆ ಗ್ರಾಮದ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು 7ನೇ ರಾಂಕ್ ಪಡೆದು ಪಾಸಾದವರು.
’ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ : ಒಂದು ಅಧ್ಯಯನ” ಎಂಬ ವಿಷಯ ಕುಳಿತು ಸಂಶೋಧನೆ ನಡೆಸಿ, 2008ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ನಡೆವ ನಡೆ (ವಿಮರ್ಶೆ), ಮೌನ ಮಾತು ಪ್ರತಿಭಟನೆ (ವಿಮರ್ಶೆ), ಡಾ. ರಾಜಕುಮಾರ್, ಸುಟ್ಟಾವು ಬೆಳ್ಳಿ ಕಿರಣ (ವಿಮರ್ಶೆ), ತನು ಮುಟ್ಟದ ಮುನ್ನ(ವಿಮರ್ಶೆ), ಸಂಬಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ - ಡಾ. ಸಿದ್ದಲಿಂಗಯ್ಯ, ಅಂತಃಕರಣ- ಸಾಂಸ್ಕೃತಿಕ ಮುಖಾಮುಖಿ(ವಿಮರ್ಶೆ) ಅವರ ಪ್ರಕಟಿತ ಕೃತಿಗಳು.
ಏಳು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ನಾಡಿನ ಅನೇಕ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಇವರ ಹಲವಾರು ಮಹತ್ವದ ಸಂಶೋಧನಾತ್ಮಕ ಲೇಖನಗಳು ಪ್ರಕಟಗೊಂಡಿವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಹೋರಾಟ, ಬರಹ, ಚಿಂತನೆಗಳ ಬಗ್ಗೆ ವಿಶೇಷ ಆಸಕ್ತಿ ಉಳ್ಳವರಾದ ಇವರು ಆ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡು ಲೇಖನಗಳನ್ನು ಪ್ರಕಟಿಸಿದ್ದಾರೆ.
ಸದ್ಯ ಕಲಬುರಗಿಯ 'ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.