‘ಮಹಾಕಾವ್ಯ’ ಎಂಬ ಮೊದಲನೆಯ ಸಂಪುಟವು ಮುಳ್ಳೂರು ನಾಗರಾಜರ ‘ನೆಲದ ಜೋಗುಳ’ ಮತ್ತು ‘ಏಕಾಂಗಿ ಏಕಲವ್ಯ’ ಮಹಾಕಾವ್ಯವನ್ನು ಒಳಗೊಂಡಿದೆ. ರಾಮಾಯಣದ ಶಂಬೂಕ, ಮಹಾಭಾರತದ ಏಕಲವ್ಯರನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ್ದಾರೆ ಮುಳ್ಳೂರು ನಾಗರಾಜ. ಇಲ್ಲಿರುವ ಮಹಾಕಾವ್ಯಗಳು ದಮನಿತ ಸಮುದಾಯಗಳ ಶೋಷಣೆಯ ಬದುಕಿನ ಹಲವು ಆಯಾಮಗಳನ್ನು ತೆರೆದಿಡುತ್ತಾ ಶಂಬೂಕ ಮತ್ತು ಏಕಲವ್ಯ ಚಿತ್ರಣಗಳನ್ನು ಹೊಸ ದೃಷ್ಟಿಕೋನದ ಮೂಲಕ ಕಂಡಿದ್ದಾರೆ. ಮುಳ್ಳೂರು ನಾಗರಾಜ ಅವರ ಕೃತಿಗಳನ್ನು ಅಪ್ಪಗೆರೆ ಸೋಮಶೇಖರ್ ಅವರು ಸಂಪಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.
ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ಅಪ್ಪಗೆರೆ ಗ್ರಾಮದ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು 7ನೇ ರಾಂಕ್ ಪಡೆದು ಪಾಸಾದವರು. ’ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ : ಒಂದು ಅಧ್ಯಯನ” ಎಂಬ ವಿಷಯ ಕುಳಿತು ಸಂಶೋಧನೆ ನಡೆಸಿ, 2008ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ (ವಿಮರ್ಶೆ), ಮೌನ ಮಾತು ಪ್ರತಿಭಟನೆ (ವಿಮರ್ಶೆ), ಡಾ. ರಾಜಕುಮಾರ್, ಸುಟ್ಟಾವು ಬೆಳ್ಳಿ ಕಿರಣ (ವಿಮರ್ಶೆ), ತನು ಮುಟ್ಟದ ಮುನ್ನ(ವಿಮರ್ಶೆ), ಸಂಬಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ ...
READ MORE