ಹಿರಿಯ ಲೇಖಕ ಕೆ.ವಿ. ನಾರಾಯಣ ಅವರ ಸಮಗ್ರ ಬರೆಹಗಳ ಸರಣಿಯ ಮೂರನೇ ಸಂಪುಟ. ಈ ಸಂಪುಟದಲ್ಲಿ ಸಾಹಿತ್ಯ- ವಿಮರ್ಶೆ ಕುರಿತ ಬರಹಗಳು ಮತ್ತು ನಾರಾಯಣ ಅವರ ಕೆಲವು ಲೇಖಕರಿಗೆ ಬರೆದ ಮುನ್ನುಡಿಗಳಿವೆ. ಒಟ್ಟು 87 ಬರೆಹಗಳಿರುವ ಈ ಗ್ರಂಥವನ್ನು ಹೊಸಗನ್ನಡ ಸಾಹಿತ್ಯದಲ್ಲಿ ಆಸಕ್ತರಾಗಿರುವವರು ಗಮನಿಸಲೇಬೇಕು. ಹೊಸಗನ್ನಡ ಸಾಹಿತ್ಯ ಸಂಶೋಧನೆಯ ಪೂರ್ವ ಚರಿತ್ರೆ ಮುನ್ನೋಟಗಳು’ ಸಂಪುಟದ ಮೊದಲ ಬರೆಹ. ಶಂಗಂ ತಮಿಳಿಗಂ. ಸೃಜನ ಸಾಹಿತ್ಯ ಪ್ರಗತಿ (1956-1981), ವಿಮರ್ಶೆಯಲ್ಲಿ ವಿಸಂಗತಿಯ ಸಾಧ್ಯತೆ, ಸಾಹಿತ್ಯ ಮತ್ತು ನಿಸರ್ಗಗಳ ಸಂಬಂಧದ ಪಲ್ಲಟಗಳು ಲೇಖನಗಳು ಆರಂಭದಲ್ಲಿ ಭೂಮಿಕೆಯನ್ನು ಒದಗಿಸುತ್ತವೆ. ಪು.ತಿ.ನ. ಅವರ ಶ್ರೀಹರಿಚರಿತೆ, ಗಂಗಾಧರ ಚಿತ್ತಾಲರ ಕಾವ್ಯ, ಬೇಂದ್ರೆಯವರ ತುತ್ತಿನ ಚೀಲ- ಒಂದು ವಿಮರ್ಶಾ ಕಮ್ಮಟ, ಕೆ.ಎಸ್.ನ. ಅವರ ಕಾವ್ಯ ಭಾಷೆ ಕುರಿತ ಲೇಖನಗಳಿವೆ. ಅಲ್ಲದೇ ಅಡಿಗ, ಕಾರಂತ, ಕಂಬಾರ, ಎಕ್ಕುಂಡಿ, ಜಿಎಸ್ಸೆಸ್, ಪುಟ್ಟಣ್ಣ, ಶಾಂತಿನಾಥ ದೇಸಾಯಿ, ಮಾಸ್ತಿ, ಲಂಕೇಶ, ತೇಜಸ್ವಿ, ಆಲನಹಳ್ಳಿ, ಯಶವಂತ ಚಿತ್ತಾಲ, ವಿ.ಸೀ. ಶ್ರೀನಿವಾಸರಾಜು ಅವರ ಕೃತಿಗಳ ಕುರಿತ ವಿಮರ್ಶಾ ಬರೆಹಗಳಿವೆ.
ಬೆಸಗರಹಳ್ಳಿ ರಾಮಣ್ಣ, ಚಿ. ಶ್ರೀನಿವಾಸರಾಜು, ಕೆ.ವೈ. ನಾರಾಯಣಸ್ವಾಮಿ, ದು. ಸರಸ್ವತಿ, ರಾಘವೇಂದ್ರ ಪಾಟೀಲ, ಅರುಣ್ ಜೋಳದ ಕೂಡ್ಲಿಗಿ, ಬೆಳ್ಳೂರು ವೆಂಕಟಪ್ಪ, ಶಶಿಕಲಾ ಮುಂತಾದವರ ಕೃತಿಗಳಿಗೆ ಬರೆದ ಮುನ್ನುಡಿಗಳನ್ನೂ ಈ ಸಂಪುಟದಲ್ಲಿ ಸೇರಿಸಲಾಗಿದೆ.
©2024 Book Brahma Private Limited.