ಹಿರಿಯ ಲೇಖಕ, ವಿಮರ್ಶಕ, ಚಿಂತಕ ಕೆ.ವಿ. ನಾರಾಯಣ ಅವರ ಇದುವರೆಗಿನ ಬರೆಹಗಳನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ತೊಂಡುಮೇವು ಸಂಪುಟಗಳ ಮೊದಲನೆಯ ಕಂತೆ ಇದು. ಈ ಸಂಪುಟದಲ್ಲಿ ಕಾವ್ಯ ಮೀಮಾಂಸೆ, ಸಾಹಿತ್ಯ ಮೀಮಾಂಸೆ, ಸಾಹಿತ್ಯದ ಸ್ವರೂಪವನ್ನು ಕುರಿತು ನಡೆಸಿದ ಚಿಂತನೆಗಳನ್ನು ಕುರಿತ ಬರೆಹಗಳನ್ನು ಒಳಗೊಂಡಿದೆ. ಸಾಹಿತ್ಯ ಸಂಶೋಧನೆಯ ತಾತ್ವಿಕತೆ, ಪರಿಕಲ್ಪನೆ, ಶೈಲಿಶಾಸ್ತ್ರ, ಧ್ವನಿತತ್ವ, ಕನ್ನಡ ಮೀಮಾಂಸೆ ಕಟ್ಟುವ ಬಗೆ, ಗ್ರೀಕ್ ಕಾವ್ಯತತ್ವ, ದೇಸಿ ಓದು, ಕುವೆಂಪು, ಬೇಂದ್ರೆ, ತಿನಂಶ್ರೀ, ಬಿಎಂಶ್ರೀ, ಶಿವರಾಮ ಕಾರಂತ, ಶಂಕರ ಮೊಕಾಶಿ ಪುಣೇಕರ್ ಅವರ ಸಾಹಿತ್ಯದ ಮೀಮಾಂಸೆಯನ್ನು ರೂಪಿಸುವ ನಿಟ್ಟಿನಲ್ಲಿ ಲೇಖಕರು ನಡೆಸಿದ ಅಪರೂಪದ ಮತ್ತು ಮಹತ್ವದ ಪ್ರಯತ್ನ ಇಲ್ಲಿನ ಬರೆಹಗಳಲ್ಲಿ ಢಾಳಾಗಿ ಎದ್ದು ಕಾಣಿಸುತ್ತದೆ. ಮೀಮಾಂಸೆಯ ಕ್ಷೇತ್ರದಲ್ಲಿ ಇದುವರೆಗೆ ಪ್ರಕಟವಾದ ಕನ್ನಡದ ಸರಿಸುಮಾರು ೩೦೦ಕ್ಕೂ ಗ್ರಂಥಗಳ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಸಾಹಿತ್ಯ-ಸಂಸ್ಕೃತಿ ಚಿಂತನೆಯಲ್ಲಿ ಆಸಕ್ತರಾಗಿರುವವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ.
©2024 Book Brahma Private Limited.