‘ತಾರಾ ಸ್ಮರಣೆ’ ಪಂಡಿತ್ ತಾರಾನಾಥ್ ಅವರ ಕುರಿತಾದ ಲೇಖನಗಳ ಸಂಕಲನ. ಲೇಖಕ ಎಂ. ಧ್ರುವನಾರಾಯಣ ಈ ಕೃತಿಯನ್ನು ಸಂಪಾದಿಸಿದ್ದಾರೆ. ಇಲ್ಲಿ ಎಂ. ಧ್ರುವನಾರಾಯಣ ಅವರ ತಾರಾನಾಥರ ಬದುಕು-ಬರಹ, ನಿಟ್ಟೂರು ಶ್ರೀನಿವಾಸರಾಯರ- ಬಹುಮುಖ ವ್ಯಕ್ತಿತ್ವದ ಸಂತ ಪುರುಷ, ಸ್ವಾಮಿರಾಯಾಚಾರ್ಯ ಒಡೆಯರ್ ಅವರ ಗುರುವರ್ಯ ತಾರಾನಾಥರು, ರಾಜೀವ ತಾರಾನಾಥ ಅವರ ಪ್ರಭಾವ-ಪವಾಡ, ಜಿ. ವೆಂಕಟಸುಬ್ಬಯ್ಯ ಅವರ ಪವಾಡ ಪುರುಷ ಸೇರಿದಂತೆ ಪಂಡಿತ ತಾರಾನಾಥರ ಬದುಕು-ಬರಹಗಳ ಮೇಲೆ ಬೆಳಕು ಚೆಲ್ಲುವ ಹಲವು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
ಹಿರಿಯ ವಿದ್ವಾಂಸ ಎಂ. ಧ್ರುವನಾರಾಯಣ ಅವರು ಜನಿಸಿದ್ದು ನಾರಾಯಣದೇವರಕೆರೆಯಲ್ಲಿ. ರಾಯಚೂರಿನ ಪಂಡಿತ್ ತಾರಾನಾಥ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ. ಜೀವನ ಚರಿತ್ರೆ ಅನುವಾದ ಕ್ಷೇತ್ರಗಳಲ್ಲದೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ. ರಾವ್ ಬಹದ್ದೂರ್, ಪಂಡಿತ ತಾರಾನಾಥ, ಹನುಮಂತಗೌಡ (ಜೀವನ ಚರಿತ್ರೆ), ಡಾ. ಬಾಬಾ ಸಾಹೇಬ ಅಂಬೇಡ್ಕರರ ಬರಹಗಳು, ವಿಜಯನಗರ ಕಾಲದಲ್ಲಿನ ನೀರಾವರಿ ವ್ಯವಸ್ಥೆ (ಅನುವಾದ), ಭಾರತದ ಸಂವಿಧಾನ, ರಾಜ್ಯ ಶಾಸ್ತ್ರ ಮೀಮಾಂಸಕರು, ಸಾರ್ವಜನಿಕ ಆಡಳಿತ (ಪಠ್ಯ ಪುಸ್ತಕಗಳು). ಪಂಡಿತ್ ತಾರಾನಾಥ ಅವರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಹಿರಿಮೆ ಅವರದು. ...
READ MORE