ಈ ಕೃತಿಯಲ್ಲಿ ಸುಮಾರು ನಲವತ್ತು ಜನ ಹಿರಿ ಕಿರಿಯ ಕನ್ನಡದ ಕವಿ / ಸಾಹಿತಿಗಳು ಮಹಾಕವಿ ಷೇಕ್ಸ್ ಪಿಯರ್ ಬಗ್ಗೆ, ಆತನ ಕೃತಿಗಳ ಬಗ್ಗೆ ಬರೆದ ಲೇಖನ, ಕವನ, ಗೀತೆ, ನಾಟಕ ಭಾಗಗಳು ಅಡಕವಾಗಿವೆ. ಷೇಕ್ಸ್ ಪಿಯರ್ನ ಸಾಹಿತ್ಯ ಸೃಷ್ಟಿಯ ಬೇರೆ ಬೇರೆ ಮುಖಗಳ ಮೇಲೆ ಬೆಳಕು ಚೆಲ್ಲುವ, ಕನ್ನಡ ಸಾಹಿತ್ಯ, ರಂಗಭೂಮಿಗಳ ಮೇಲೆ ಆತನ ಪ್ರಭಾವವನ್ನು ತೋರಿಸುವ ಹಾಗು ಹೊಸಗನ್ನಡದಲ್ಲಿ ಆವರೆಗೆ ಅನುವಾದವಾಗದೆ ಉಳಿದಿದ್ದ ಕವನಗಳು ಕನ್ನಡ ಓದುಗರಿಗೆ ಈ ಕೃತಿಯ ಮೂಲಕ ದೊರೆತಿದೆ.
ಶಾ. ಬಾಲುರಾವ್ ಅವರು 1929 ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕರಾಗಿದ್ದವರು. ಇವರ ಪ್ರಮುಖ ಕೃತಿಗಳೆಂದರೆ ಷೇಕ್ಸ್ಪಿಯರಿಗೆ ನಮಸ್ಕಾರ (ಸಂಪಾದಿತ), ಬೆಕ್ಕು–ಬಾವಿ, ಹೋಲೆ…ಹೋಲೆ ಬೆಳ್ಳಕ್ಕಿಮಾಲೆ, ನಡೆದದ್ದೇ ದಾರಿ, ಸೂರ್ಯ ಇವನೊಬ್ಬನೇ ಮುಂತಾದವು. ...
READ MORE