ಗಿರೀಶ ಅವರ ಎಲ್ಲ ನಾಟಕಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ.
ಯಯಾತಿ, ತುಘಲಕ್, ನಾಗಮಂಡಲ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಬಲಿ (ಹಿಟ್ಟಿನ ಹುಂಜ), ಹಯವದನ, ಹೂವು, ಒಡಕಲು ಬಿಂಬ, ಮದುವೆ ಆಲ್ಬಂ, ಬೆಂದ ಕಾಳೂರು ಅನ್ ಟೋಸ್ಟ್ ನಾಟಕಗಳು ಈ ಸಮಗ್ರ ಸಂಪುಟದಲ್ಲಿವೆ.
ಗಿರೀಶ ಕಾರ್ನಾಡ ಅವರ ಮೊದಲನೆಯ ನಾಟಕ, 'ಯಯಾತಿ', 1962 ರಲ್ಲಿ ಪ್ರಕಟವಾಯಿತು.
ಅಂದಿನಿಂದ ಈವರೆಗೆ ಅವರು ಬರೆದ ಒಟ್ಟು ಪನೊಂದು ನಾಟಕಗಳು ಈ ಗ್ರಂಥದಲ್ಲಿ ಸಂಗ್ರಹಿತವಾಗಿವೆ. ಅವರ ನಾಟ್ಯಲೇಖನಕ್ಕಾಗಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾದಮಿ ಫೆಲೋಶಿಪ್, ಕೇಂದ್ರ ಸಾಹಿತ್ಯ ಅಕಾದಮಿ ಬಹುಮಾನ, ಜ್ಞಾನಪೀಠ ಪ್ರಶಸ್ತಿ ಹಾಗೂ ಪದ್ಮಭೂಷಣ ದೊರೆತಿವೆ. ಅವರ ನಾಟಕಗಳು ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲಿ ಮಾತ್ರವಲ್ಲ, ಯುರೋಪ್-ಅಮೆರಿಕಾಗಳಲ್ಲಿ ಕೂಡ ಪ್ರದರ್ಶಿತವಾಗಿವೆ.
ನಾಟಕಕಾರ ಗಿರೀಶ್ ಕಾರ್ನಾಡ್ ಅವರು ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ, ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...
READ MORE