’ಕನ್ನಡದ ಪುಲ್ಲೆನಗೆ ಪಾವನ ತುಳಸಿ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು. ಕನ್ನಡ ನವೋದಯ ಕವಿಗಳಲ್ಲಿ ಒಬ್ಬರಾಗಿ ’ಸಾರಾ’ ಅವರು ಧಾರವಾಡದಲ್ಲಿ ಶಿಕ್ಷಕರಾಗಿದ್ದರು. ಅವರ ಮಗ ರಾಮ ತೀರಿಕೊಂಡಾಗ ರಚಿಸಿದ ’ತಿಲಾಂಜಲಿ’ ಕನ್ನಡದ ಮೊದಲ ವಿಲಾಪಗೀತೆ. ರಾಮಚಂದ್ರರಾಯರು ರಚಿಸಿದ ರಾಮಾಯಣ ಕಾವ್ಯದ ಸರಣಿ ಕೃತಿಗಳು ಪೂರ್ಣವಾಗಿ ಪ್ರಕಟವಾಗದೇ ಇರುವುದು ಬಹುದೊಡ್ಡ ನಷ್ಟ.
ಹಿರಿಯ ಕವಿ- ಅನುವಾದಕ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ರಾಮಚಂದ್ರರಾಯರ ಎಲ್ಲ ಕವಿತೆಗಳನ್ನು ಈ ಸಂಕಲನದಲ್ಲಿ ಸಂಗ್ರಹಿಸಿ ನೀಡಿದ್ದರು. ರಾಮಚಂದ್ರರಾಯರ ಸಮಗ್ರ ಕವಿತೆಗಳ ಸಂಗ್ರಹ ಇದಾಗಿದೆ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE