ಎಸ್.ವಿ. ಪರಮೇಶ್ವರ ಭಟ್ಟರ ರಾಗಿಣಿ, ಗಗನ ಚುಕ್ಕಿ, ಅಂಚೆಯ ಪೆಟ್ಟಿಗೆ, ಸುರಗಿ-ಸುರಹೊನ್ನೆ, ತುಂಬೆ ಹೂವು, ಚಿತ್ರಪಥೆ ಕೃತಿಗಳನ್ನು ಒಳಗೊಂಡಿದೆ.
ಕಥೆಗಾರ್ತಿ, ಸಂಗೀತಗಾರ್ತಿ, ಕವಯತ್ರಿ, ಅನುವಾದಕಿಯಾದ ಚಂದ್ರಕಲಾ ನಂದಾವರ ಕೆ.ವಿ. ಅವರು ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರು. ಹುಟ್ಟಿದ್ದು 1950 ನವೆಂಬರ್ 21 ಮಂಗಳೂರಿನ ಬಿಜೈನಲ್ಲಿ. ಸಾಹಿತ್ಯ, ಶಿಕ್ಷಣಕವಾದ ಹಲವಾರು ವಿಚಾರ ಸಂಕಿರಣಗಳು, ಕಮ್ಮಟಗಳಲ್ಲಿ ಭಾಗಿಯಾಗುತ್ತಾರೆ. ಪ್ರತಿಭಾವಂತ ಲೇಖಕಿಯಾದ ನಂದಾವರ ರವರ ಒಲವು ಕಥೆ, ಕವನ, ಜೀವನ ಚರಿತ್ರೆ ಮತ್ತು ಪ್ರಬಂಧಗಳತ್ತು ಹಲವಾರು ಸಣ್ಣ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ಜಾನಕಿ ಬ್ರಹ್ಮಾವರ ರವರ ತುಳು ಕಾದಂಬರಿಯ ಅನುವಾದದ ಕೃತಿ ‘ಯಾರಿಗೆ ಯಾರುಂಟು’ ಕಾದಂಬರಿಯು ಮಂಗಳೂರು ವಿ.ವಿ.ದ ಪದವಿಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. ‘ಕಯ್ಯಾರ ಕಾವ್ಯ’ ...
READ MORE