ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ಹಣಕಾಸು ಅಧಿನಿಯಮದ ತಿದ್ದುಪಡಿ ಮಸೂದೆ, ಶಿಕ್ಷಣಕ್ಕೆ ಅನುದಾನ, ಮುಂಬಯಿ ವಿಶ್ವವಿದ್ಯಾಲಯ ಅಧಿನಿಯಮ ತಿದ್ದುಪಡಿ ಮಸೂದೆ, ಆನುವಂಶಿಕ ಹುದ್ದೆಗಳ ಅಧಿನಿಯಮದ ತಿದ್ದುಪಡಿ, ಖೋತಿ ಪದ್ಧತಿಯ ರದ್ಧತಿ ಮಸೂದೆ, ಗ್ರಾಮ ಪಂಚಾಯಿತಿಗಳ ಮಸೂದೆ ಕುರಿತ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ. ಅಂಬೇಡ್ಕರ್ ಅವರ ಬರವಣಿಗೆ ಮತ್ತು ಭಾಷಣಗಳಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರಗಳು ಭಾರತದ ಸಾಮಾಜಿಕ ವಿಚಾರದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಮಹತ್ವದ್ದು.