ಗೀತನಾಟಕಗಳ ಮೂಲಕ ಪ್ರಸಿದ್ಧರಾದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರ ಗದ್ಯರಚನೆಗಳ ಸಮಗ್ರ ಸಂಕಲನ ಇದು. ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧ ಎಂಬ ನಾಲ್ಕು ವಿಭಾಗಗಳು ಕೃತಿಯಲ್ಲಿವೆ. ಸಂಪಾದಕರು ಜಿ.ಎಸ್. ಶಿವರುದ್ರಪ್ಪ ಮತ್ತು ಎಚ್.ಎಸ್.ವೆಂಕಟೇಶಮೂರ್ತಿ.
ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯ ಇದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿವೆ.
ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...
READ MORE