ನೆಲದನಿಗೆ ಕಿವಿಯಾನಿಸಿದ ಮಾತ್ರಕ್ಕೆ ಮಣ್ಣಿನ ಪಸೆಗೆ ಕೈಯಾನಿಸಿದ ಮಾತ್ರಕ್ಕೆ ದೇಸಿಪ್ರಜ್ಞೆ ದಕ್ಕಿಬಿಡುವುದಿಲ್ಲ. ಮೈಯ್ಯಾನಿಸಬೇಕು ಮನಸ್ಸು ಧ್ಯಾನಿಸಬೇಕು, ಆನುತಾನೆಂಬುದ ಕಳಕೊಂಡು ನಿಸರ್ಗತನವ ಪಡಕೊಳ್ಳಬೇಕು. ಹಾಗಾದರೆ ಮಾತ್ರ ನೆಲದ ದನಿ ಮಾತಾಗಿ, ಮಾತು ಪದವಾಗಿ ಪದ ಕಾವ್ಯವಾಗಿ ಕಾವ್ಯ ಅನುಭವವಾಗಿ ಮನ ತುಂಬಿಕೊಳ್ಳುತ್ತದೆ. ಹೀಗೆ ನೆಲದ ತವಕ ತಲ್ಲಣಗಳನ್ನು ತಮ್ಮ ಅನುಭಾವಿಕ ನುಡಿಯಲ್ಲಿ ಒತ್ತಟ್ಟು ಮಾಡಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರ ಕಾವ್ಯ ಕಟ್ಟಿದ್ದಾರೆ.
ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ...
READ MORE