ಡಾ. ಕಲ್ಯಾಣರಾವ ಜಿ. ಪಾಟೀಲ ಅವರ ಪ್ರಧಾನ ಸಂಪಾದಕತ್ವದಲ್ಲಿ *ಕನ್ನಡ ಸಾಹಿತ್ಯ ಪುನರಾವಲೋಕನ ಮಾಲೆ* ಎಂಬ ವಿನೂತನ ಶೈಕ್ಷಣಿಕ ಶಿಸ್ತಿನ, ಸಾಹಿತ್ಯಿಕ ಯೋಜನೆಯ ಹತ್ತು ಸಂಪುಟಗಳು ಹೊರಬರುತ್ತಿರುವುದು ನಾಡಿನ ಸಾರಸ್ವತ ಲೋಕವೇ ಹೆಮ್ಮೆಪಡುವ ಸಂಗತಿಯಾಗಿದೆ. ಈ ಮಾಲೆಯ ಏಳನೆಯ ಸಂಪುಟ 'ನವ್ಯ ಸಾಹಿತ್ಯ'ವನ್ನು ವಿದ್ಯಾರ್ಥಿ ಮಿತ್ರ ಡಾ. ರಾಜಶೇಖರ ಬಿರಾದಾರ ಅವರು ಸಂಪಾದಿಸಿದ್ದಾರೆ. ಸಹೃದಯ ಓದುಗರ ಪ್ರಜ್ಞೆ ವೈಯಕ್ತಿಕ ಸಂವೇದನೆಗೆ ಹೆಚ್ಚಿನ ಮಹತ್ವವನ್ನು ನೀಡಿದ ಈ ಸಾಹಿತ್ಯ ಪಂಥವು ಪ್ರತಿಯೊಬ್ಬರ ಆಸೆ, ಅಭಿಲಾಷೆ, ಸಾಧನೆ ಮತ್ತು ಸಾಮರ್ಥ್ಯಗಳಿಗೆ ಕ್ಷಕಿರಣ ಬೀರಿ, ಒಡಮೂಡಿಸಿದ ಪ್ರಜ್ಞೆ ಅತ್ಯಂತ ಗಮನಾರ್ಹವಾದುದು. ಈ ಕೃತಿಯಲ್ಲಿ ಸಮಾವೇಶಗೊಂಡಿರುವ ಲೇಖನಗಳು ನವ್ಯ ಸಾಹಿತ್ಯದ ಸ್ವರೂಪ, ಆಶಯ, ಧ್ವನಿ, ಉದ್ದೇಶ ಮತ್ತು ಸಂವೇದನೆಯಂತಹ ಅಂಶಗಳನ್ನು ಗಂಭೀರವಾಗಿ ಪ್ರಚುರಪಡಿಸಿರುವುದಾಗಿವೆ. ನವ್ಯ ಸಾಹಿತ್ಯದ ಮರುಓದನ್ನು ಹೇಗೆ ಮಾಡಬೇಕು ಎಂಬುದನ್ನು ಹೊಸ ತಲೆಮಾರಿನ ಓದುಗರಿಗೆ ಮನನಗೊಳಿಸುವುದಾಗಿದೆ. ಡಾ. ವಿಠಲರಾವ್ ಟಿ. ಗಾಯಕ್ವಾಡ್, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ ಹಂಪಿ (ಬೆನ್ನುಡಿಯಿಂದ)
©2024 Book Brahma Private Limited.