ಭಾರತೀಯ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನ ಪಡೆದ ಎತ್ತರದ ವ್ಯಕ್ತಿಗಳಲ್ಲಿ ಸಾಹಿತಿ ವಿ. ಕೃ ಗೋಕಾಕರೂ ಒಬ್ಬರು.
ಹದಿನಾರು ಸಂಪುಟಗಳಲ್ಲಿ ಪ್ರಕಟಿಸಲು ಉದ್ದೇಶಿಸಿದ್ದ ಡಾ.ವಿನಾಯಕ ಕೃಷ್ಣ ಗೋಕಾಕರ ಸಮಗ್ರ ಸಾಹಿತ್ಯ ಮಾಲೆಯ ಎರಡನೆಯ ಸಂಪುಟವಾಗಿ ’ನವೋದಯ ಕಾವ್ಯ ಭಾಗ - 2' ಕೃತಿ ರಚಿತವಾಗಿದೆ.
ಪ್ರಸ್ತುತ ಸಂಪುಟವು ವಿನಾಯಕರ ನವೋದಯ ಕಾವ್ಯದ ಒಂದು ಭಾಗವನ್ನೊಳಗೊಂಡಿದೆ. ಇಲ್ಲಿ ಪಯಣ, ಕಲೋಪಾಸಕ, ತ್ರಿವಿಕ್ರಮರ ಆಕಾಶಗಂಗೆ, ಹಿಗ್ಗು ಸಂಕಲನಗಳಲ್ಲದೆ ಅನೇಕ ಸುನೀತಗಳು ಸೇರಿವೆ. ವಿನಾಯಕ ಎಂಬ ಕಾವ್ಯನಾಮದಲ್ಲಿ ಪ್ರಸಿದ್ಧವಾಗಿರುವ ಡಾ. ಗೋಕಾಕರು ಹೊಸಗನ್ನಡ ಸಾಹಿತ್ಯವನ್ನು ನಿರ್ಮಿಸಿದ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಸಮುದ್ರ ಗೀತೆಗಳು ಕನ್ನಡ ಕಾವ್ಯಕ್ಕೆ ಹೊಸ ಮೆರುಗನ್ನು ಬೆರಗನ್ನೂ ತಂದಿತು. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸಕಥನ, ಪ್ರಬಂಧ ಮೊದಲಾಗಿ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ ಅವರು, ಖ್ಯಾತರೆನ್ನಿಸಿದ ಭಾರತೀಯ ಇಂಗ್ಲೀಷ್ ಲೇಖಕರಲ್ಲಿಯೂ ಒಬ್ಬರಾಗಿದ್ದಾರೆ.
©2024 Book Brahma Private Limited.