‘ನಾಡಿ ಮಿಡಿತ’ ಸಮಗ್ರ ಕಾದಂಬರಿಗಳ ಸಂಪುಟವಾಗಿದ್ದು, ಈ ಕೃತಿಯು ನಾ. ಡಿಸೋಜ ಅವರ ಸಂಪುಟ-1 ಭಾಗವಾಗಿದೆ. ಈ ಸಂಪುಟದಲ್ಲಿ ಬಂಜೆ ಬೆಂಕಿ, ಮಂಜಿನ ಕಾನು, ಈ ನೆಲೆ ಈ ಜಲ ಮತ್ತು ಅಜ್ಞಾತ ಕಾದಂಬರಿಗಳಿವೆ. ಮೊದಲ ಕಾದಂಬರಿ ‘ಬಂಜೆ ಬೆಂಕಿ’ 1974 ರಲ್ಲಿ ಹೊರಬಂದಿತು. ಒಂದು ಪ್ರಚಲಿತ ಸಮಸ್ಯೆಯನ್ನೇ ನೇರವಾಗಿ ಮುಟ್ಟಿತು. ಒಂದು ಕುಟುಂಬದ ಒಳ ಆಗುಹೋಗುಗಳು ಹೇಗೆ ಸಾಮಾಜಿಕ ಸ್ಥಿತ್ಯಂತರಗಳಿಗೆ ಕಾರಣವಾಗಿ, ಒಂದು ಎಳೇ ಜೀವ ಹೇಗೆ ತನ್ನ ನಾಶವನ್ನು ಮಾಡಿಕೊಳ್ಳುತ್ತದೆ ಎಂಬ ವಿಷಯ ಈ ಕಾದಂಬರಿಯ ಮೂಲಕ ಓದುಗರ ಮುಂದೆ ಆಕಾರ ಪಡೆಯುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ‘ಮಂಜಿನ ಕಾನು’ 1967ರಲ್ಲಿ ಪ್ರಕಟಗೊಂಡ ಕಾದಂಬರಿ. ಮಂಜಿನಿಂದ ಆವೃತ್ತಗೊಂಡ ಒಂದು ಕಾಡಿನ ಕತೆಯೊಂದಿಗೆ ಈ ಕೃತಿಯು ಆರಂಭಗೊಳ್ಳುತ್ತದೆ. ಮಲೆನಾಡಿನ ದಟ್ಟ ಅರಣ್ಯ, ಶ್ರೀಮಂತರ ಮನೆಗಳಲ್ಲಿ ಬದುಕನ್ನು ಮಾಡಿಕೊಂಡು ಬದುಕುತ್ತಿರುವ ‘ಹಸಲರು’ ಗುಡ್ಡಗಾಡು ಜನರ ಬದುಕು ಹೀಗೆ ಈ ಜನರ ಬದುಕನ್ನೇ ಪ್ರಧಾನವಾಗಿ ಇರಿಸಿಕೊಂಡು ಈ ಕಾದಂಬರಿಯನ್ನು ಬರೆಯಲಾಗಿದೆ. ‘ಈ ನೆಲ ಈ ಜಲ’ ಈ ಸಂಪುಟದ ಮೂರನೇಯ ಕಾದಂಬರಿ. ಇಲ್ಲಿ ಲೇಖಕರು ತಮ್ಮ ಸೇವೆಯನ್ನು ಪ್ರಾರಂಭಿಸಿದ ಪ್ರದೇಶದ ನೆಲ ಜಲವನ್ನು ಆಧಾರವಾಗಿರಿಸಿಕೊಂಡು ಬರೆದಿದ್ದಾರೆ. ಅಲ್ಲಿ ಅನೆಕಟ್ಟು ಎದ್ದು ನಿಲ್ಲುವುದು, ಅಣೆಕಟ್ಟಿನಲ್ಲಿ ಸಂಗ್ರಹವಾಗುವ ಅಪಾರ ಜಲ. ಹೀಗೆ ಈ ಜಲ ಮತ್ತು ನೆಲದ ಸಂಬಂಧ ಲೇಖಕರನ್ನು ಚಿಂತನೆಗೆ ಹಚ್ಚುವ ಗುಣ ಸ್ವಭಾವ, ವರ್ತನೆ, ನಡೆಯ ವಸ್ತುಗಳ ಮಿಲನದ ಬಗ್ಗೆ ಬರೆದ ಕಾದಂಬರಿ ಇದಾಗಿದೆ. ‘ಕೆಂಪು ತ್ರಿಕೋನ’ ಅನ್ನುವುದು ಕುಟುಂಬ ಘೋಷಣೆಯ ಪುಸ್ತಕವಾಗಿ ಹಲವರ ಗಮನ ಸೆಳೆದಿದೆ. ‘ಅಜ್ಞಾತ’ ಒಳಪುಟಗಳಲ್ಲಿ ಸೂಕ್ಷ್ಮವಾಗಿ ತನ್ನ ನಾಯಕನ ಬಗ್ಗೆ ಹೇಳಿಕೊಳ್ಳುತ್ತದೆ. ಅಂತೆಯೇ ತ್ರಿಕೋನ ಕೂಡ ಆಸ್ಪತ್ರೆಯಲ್ಲಿ ದುಡಿಯುವ ನೌಕರರ ಲೈಂಗಿಕ ಜೀವನದ ಬಗ್ಗೆ ಮಾತಾಡುತ್ತದೆ.
©2024 Book Brahma Private Limited.