‘ಮಿಂಚಿನ ಚಿಲುಮೆ’ ಕಿಶೋರ ಸಾಹಿತಿ ಅಂತಃಕರಣನ ಆಯ್ದ ಸಮಗ್ರ ಸಾಹಿತ್ಯ ಸಂಕಲನ. ಅಂತಃಕರಣನ ಆಯ್ದ ಕತೆಗಳ ಸಂಕಲನ ಈ ಕೃತಿ. ಆತನ ಸೃಜನಶೀಲತೆಗೆ ಕೈಪಿಡಿ. ಈ ಕೃತಿಗೆ ಖ್ಯಾತನಾಮರು ಬೆನ್ನುಡಿ ಬರೆದಿದ್ದಾರೆ. ‘ಕತೆ ಎನ್ನುವುದು ಮನುಷ್ಯ ಸೃಷ್ಟಿ ಮಾಡಿದ ಮೊಟ್ಟ ಮೊದಲ ಕಲಾಕೃತಿ ಇರಬಹುದು ಎಂಬುದು ನನ್ನ ಊಹೆ ಏಕೆಂದರೆ ಒಂದು ಕಲಾಕೃತಿಯಲ್ಲಿ ಇರಬಹುದಾದ ಎಲ್ಲ ಅಂಶಗಳನ್ನು ಒಂದು ಕತೆಯಲ್ಲಿ ಜೋಡಿಸಿ ಇಡುವ ಹಾಗೆ ಬೇರೆ ಮಾಧ್ಯಮದಲ್ಲಿ ಆಗುವುದಿಲ್ಲ. ಈ ಗುಟ್ಟನ್ನು ಅಂತಃಕರಣ ಕೈವಶ ಮಾಡಿಕೊಂಡಿದ್ದಾನೆ’ ಎನ್ನುತ್ತಾರೆ ಹಿರಿಯ ಕತೆಗಾರ ಡಾ. ನಾ. ಡಿಸೋಜಾ. ಅಂತಃಕರಣನ ಬಹುತೇಕ ಕತೆಗಳಲ್ಲಿ ಸಮಷ್ಠಿಪ್ರಜ್ಞೆ ಮತ್ತೆ ಮತ್ತೆ ಪ್ರಕಟಗೊಂಡಿದೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE