ಭಾರತದ ಹೆಸರಾಂತ ಬರಹಗಾರ್ತಿ ಬಂಗಾಳದ ಮಹಾಶ್ವೇತಾದೇವಿ ಅವರ ಬರಹಗಳು ಕನ್ನಡಕ್ಕೂ ಅನುವಾದಗೊಂಡಿವೆ. ಮೌಖಿಕ ಇತಿಹಾಸ, ಜನಕಥೆ, ಜಾನಪದ ಜ್ಞಾನದಲ್ಲಿ ಅಪಾರ ನಂಬಿಕೆ ಹೊಂದಿದ್ದ ಮಹಾಶ್ವೇತಾದೇವಿ ಇವೆಲ್ಲವನ್ನೂ ತಮ್ಮ ಬರಹದಲ್ಲಿ ರೂಢಿಸಿಕೊಂಡಿದ್ದರು. ಇವರು ಬರೆದ ಕಥಾ ಸಂಕಲನ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಈ ಕೃತಿಯಲ್ಲಿ ಮಹಾಶ್ವೇತಾದೇವಿ ಅವರ ಕಥಾ ಸಂಕಲನಗಳ ಸಮಗ್ರ ಮಾಹಿತಿ ದೊರೆಯುತ್ತದೆ. ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿರುವ ಈ ಪುಸ್ತಕದಲ್ಲಿ ಮಹಾಶ್ವೇತಾದೇವಿ ಅವರು ಬರೆದ ಕಥೆಗಳ ಆಯ್ದ ಅಧ್ಯಾಯಗಳನ್ನು ಕನ್ನಡದ ಓದುಗರಿಗೆ ನೀಡಿದ್ದಾರೆ.
ಸ್ತ್ರೀವಾದಿ ಲೇಖಕಿ, ಚಿಂತಕಿ ಎಚ್.ಎಸ್.ಶ್ರೀಮತಿ ಅವರು ಜನಿಸಿದ್ದು 1950 ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ. ತಂದೆ ಎಚ್.ಕೆ.ಸೂರ್ಯನಾರಾಯಣ ಶಾಸ್ತ್ರಿ, ತಾಯಿ ಲಲಿತ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ. ಇವರು ಅನುವಾದಿಸಿರುವ ಪ್ರಮುಖ ಕೃತಿಗಳೆಂದರೆ ಸೆಕೆಂಡ್ ಸೆಕ್ಸ್, ಆಧುನಿಕ ಭಾರತದಲ್ಲಿ ಮಹಿಳೆ, ಬೇಟೆ, ತಾಯಿ, ರುಡಾಲಿ, ದೋಪ್ದಿ ಮತ್ತು ಇತರ ಕಥೆಗಳು, ವೇದಗಳಲ್ಲಿ ಏನಿದೆ, ಪ್ರಾಚೀನ ಭಾರತದ ಚರಿತ್ರೆ ಮುಂತಾದವು. ಮಹಾಶ್ವೇತಾದೇವಿಯವರ ಕುರಿತು ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇವರು ಸಂಪಾದನೆ ಮಾಡಿರುವ ಕೃತಿಗಳೆಂದರೆ ಕನ್ನಡ ...
READ MORE