ಕುವೆಂಪು ಅವರ ನಾಟಕಗಳು ಈ ಶತಮಾನದುದ್ದಕ್ಕೂ ಅನೇಕ ಸಾಂಸ್ಕೃತಿಕ ವಾಗ್ವಾದಗಳಿಗೆ ಎಡೆಮಾಡಿಕೊಟ್ಟಿವೆ. ಕುವೆಂಪು ಅವರಿಂದ ರಚಿತವಾದ ಎಲ್ಲ ನಾಟಕಗಳು ಈ ಸಂಕಲನದಲ್ಲಿವೆ. ಅವರ ಎಲ್ಲ ನಾಟಕಗಳನ್ನು ಒಂದೆಡೆ ಸಂಕಲಿಸುವ ಮೂಲಕ ಅವುಗಳನ್ನು ಮರುಓದಿಗೆ, ಮರುಚಿಂತನೆಗೆ ಒಳಪಡಿಸಿ ಕುವೆಂಪು ಅವರ ಮನೋರಂಗಭೂಮಿ, ರಂಗಭೂಮಿಯ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿ ಗ್ರಹಿಸಲು ಅನುವಾಗುವಂತಹ ಉದ್ದೇಶವನ್ನಿರಿಸಿಕೊಂಡು ಈ ಸಂಪುಟವನ್ನು ಹೊರತರಲಾಗಿದೆ. ಈ ಸಂಪುಟದಲ್ಲಿರುವ ವಿವಿಧ ನಾಟಕಗಳೆಂದರೆ: ಜಲಗಾರ , ಯಮನ ಸೋಲು , ಸ್ಮಶಾನ ಕುರುಕ್ಷೇತ್ರಂ , ಮಹಾರಾತ್ರಿ , ವಾಲ್ಮೀಕಿಯ ಭಾಗ್ಯ , ಶೂದ್ರತಪಸ್ವಿ , ಬೆರಳ್ಗೆಕೊರಳ್ , ಬಲಿದಾನ , ಚಂದ್ರಹಾಸ , ಕಾನೀನ ೧1. ಬಿರುಗಾಳಿ , ರಕ್ತಾಕ್ಷಿ , ಮೋಡಣ್ಣನ ತಮ್ಮ , ನನ್ನ ಗೋಪಾಲ
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE