ಸ. ರಘುನಾಥರ ಸಮಗ್ರ ಸಾಹಿತ್ಯ ಸಂಪುಟ-6ರ ಕೃತಿಯಾಗಿ ಲೇಖನಗಳ ಸಂಕಲನ-ಕೆಮ್ಮಣ್ಣು ಪ್ರಕಟಗೊಂಡಿದೆ. ಕೃತಿ ಕರ್ತೃ ಸ. ರಘುನಾಥ. ಕೊಂಚ ನನ್ನೋವು, ಮನದಲ್ಲಿ ಅರಳಿದವರು, ಕೋಲಾರ ಸೀಮೆ ಓದು, ಓದು, ಮಡಿಲಿಗೆ ಬಿದ್ದೋವು, ನಮ್ಮೋರ ದನಿ ಹೀಗೆ 6 ಭಾಗವಾಗಿ ಕೃತಿಯನ್ನು ವಿಭಾಗಿಸಲಾಗಿದೆ. ಒಟ್ಟು 126 ಲೇಖನಗಳಿವೆ.
‘ಕೆಮ್ಮಣ್ಣು’ ಸಮಗ್ರ ಕೃತಿ ಕುರಿತು ಲೇಖಕರು ‘ರೇಗಡಿ ಎಂದರೆ ಮಣ್ಣು. ವ್ಯವಸಾಯಕ್ಕೆ ಯೋಗ್ಯವಾದ ಮಣ್ಣು. ಕೆಂಪು ರೇಗಡಿ, ಕಪ್ಪು ರೇಗಡಿ ಎಂಬ ವಿಧಗಳಿವೆ.ಇಲ್ಲಿನ ಲೇಖನಗಳು ಈ ಮಣ್ಣುಗಳ ಸಾವಯವ ಗುಣ ವಾಸನೆಯವು ಎಂಬ ವಿಶ್ವಾಸ ತಳೆದು, ಬರೆದ ಲೇಖನಗಳಲ್ಲಿ ನನ್ನ ಹುಡುಕಿಗೆ ಸಿಕ್ಕಷ್ಟನ್ನ ಸಮಗ್ರವೆಂಬ ಈ ಸಂಕಲನದಲ್ಲಿ ಸೇರಿಸಲಾಗಿದೆ’ ಎಂದು ಹೇಳಿಕೊಂಡಿದ್ದಾರೆ ಮಾತ್ರವಲ್ಲ; `ಕಾಲ ಕಟ್ಟಿ ತೋರಿಸಿದ ದಾರಿಯಲ್ಲಿ ನಾನು ಕಂಡಿದ್ದು , ಜೊತೆ ಮಾಡಿಕೊಂಡು ಎದೆಗೆ ತೋರಿಸಿದ್ದು, ಹೇಳಿದ್ದು ಇಲ್ಲಿದೆ. ಹಾಗಾಗಿ ಸ್ಪರ್ಶ, ವಾಸನೆ ಇದೆ. ಆದರೆ, ರುಚಿ ಬಗ್ಗೆ ಹೇಳಲಾರೆ’ ಎಂದು ತಮ್ಮ ಲೇಖನ ಸಾಹಿತ್ಯದ ಗುಣಮಟ್ಟವನ್ನು ಓದುಗರ ವಿಮರ್ಶೆಗೆ ಬಿಟ್ಟಿದ್ದಾರೆ.
©2024 Book Brahma Private Limited.