‘ಕಾತಚಿ: ನುಡಿ-ನಡಾವಳಿ ಸಂಪುಟ ಭಾಗ-2’ ಕೃತಿಯು ಕಾ.ತ ಚಿಕ್ಕಣ್ಣ ಅವರ ಸಂಪುಟವಾಗಿದೆ. ಈ ಕೃತಿಯಲ್ಲಿ ನಿಶಬುದದೆಡೆಗೆ, ಕನ್ನಡ ಎನೆ, ಉಕ್ಕೆ ಸಾಲು, ವಧೂಟಿ, ಕಣ್ಣಂಚಿನ ನೆಳಲು ಮತ್ತು ಚದುರಂಗ ಸೇರಿದಂತೆ ಆರು ಕೃತಿಗಳ ವಿಚಾರವನ್ನು ನೀಡಲಾಗಿದೆ.
ಕೃತಿಯಲ್ಲಿನ ‘ಕನ್ನಡ ಎನೆ’ ಕುರಿತು ಲಕ್ಷ್ಮಣ ಕೊಡಸೆ ಹೀಗೆ ಹೇಳಿದ್ದಾರೆ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿ ಮಾತ್ರವಲ್ಲದೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಹಿತರಕ್ಷಣೆಗೆ ಪೂರಕವಾದ ಶಾಶ್ವತ ಕಾರ್ಯಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಸಾಂಸ್ಕೃತಿಕ ಪರಿಚಾರಕರಾಗಿ ಚಿಕ್ಕಣ್ಣನವರ ಸೇವೆಯನ್ನು ಪರಿಗಣಿಸಲಾಗುತ್ತದೆ, ಎಂದಿದ್ದಾರೆ.
ಶಶಿಧರ್ ಭಾರಿಘಾಟ್ ಕೃತಿಯಲ್ಲಿನ ‘ಚದುರಂಗ’ ಕುರಿತು; ಪುಟದಿಂದೆದ್ದು ಬಂದ ಪಾತ್ರಗಳು ಚದುರಂಗರ ಬದುಕಿನ ಭಾಗವಾಗುವ ಸಂದರ್ಭದಲ್ಲೇ, ವರ್ತಮಾನಕ್ಕೂ ಪ್ರತಿಕ್ರಿಯಿಸುತ್ತಾ, ನಾಟಕಕ್ಕೆ ಪುರಾಣದ ಆಯಾಮವನ್ನು ನೀಡಿರುವುದು ನಾಟಕಕಾರ ಚಿಕ್ಕಣ್ಣನವರ ಕಥನ ಶಕ್ತಿಯ ವಿಶೇಷ ಗುಣ ಎಂದು ತಿಳಿಸಿದ್ದಾರೆ.
ವೀ.ಚಿ ‘ವಧೂಟಿ’ ಕುರಿತು; ಆರು ದೃಶ್ಯಗಳ ಪುಟ್ಟ ರೂಪಕದಲ್ಲಿ ಬರುವ ವಧೂಟಿ ಮತ್ತು ಕನಕರ ಸಂಬಂಧ ಯೋಗ ಯೋಗಿನಿಯರ ಸಂಬಂಧದ ಹಾಗೆ ಅಲೌಕಿಕ ಸ್ಪರ್ಶವನ್ನು ಹೊಂದಿದೆ. ಕನಕರ ಆಶಯದ ವಿಸ್ತರಣೆಯಂತೆ ವಧೂಟಿ ರೂಪಕದಲ್ಲಿ ಜನ ಸಾಮಾನ್ಯರ ಹಿತದ ಬಗ್ಗೆ ಹಂಬಲಿಸುತ್ತಾಳೆ ಎನ್ನುತ್ತಾರೆ.
©2024 Book Brahma Private Limited.