‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 8’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಸಂಸ್ಕೃತಿ ಚಿಂತನೆ, ಹೊಸ ವಿಚಾರಗಳು, ಸಮಕಾಲೀನ ವಿಚಾರಗಳ ಸಮಗ್ರ ಸಾಹಿತ್ಯ ಕೃತಿಯಾಗಿದೆ. ಧರ್ಮ ಮತ್ತು ಜಾತಿ ಭಾಗದಲ್ಲಿ ಭಾರತೀಕರಣ ಒಂದು ಚಿಂತನೆ, ಹಿಂದೂ ಧರ್ಮದ ಕೊನೆಯ ದಿನಗಳು, ಜಾತಿ, ವರ್ಗಗಳ ಕದನ, ನಮ್ಮ ಗಂಭೀರ ಚಿಂತನೆ ಇವರಿಗೆ ಅರ್ಥವಾಗಿಲ್ಲ, ಇದಕ್ಕೆ ಕೊನೆ ಇದೆಯೆ?, ಧರ್ಮ ಗ್ರಂಥಗಳ ಅರ್ಥ, ನಿಜವಾದ ಜಾತ್ಯತೀತರಿಗೆ-ಮೀಸಲಾತಿ ಎಲ್ಲಿ?, ಮಂಥನ, ಎಲ್ಲ ಮೂಲಭೂತವಾದ ಎಲ್ಲರಿಗೂ ಸಂಬಂಧಿಸಿದ್ದು, ಯು.ಆರ್.ಅನಂತಮೂರ್ತಿ ಮತ್ತು ಮತಾಂತರ, ಜಾತ್ಯಾತೀತರು ಮತ್ತು ರಾಷ್ಟ್ರೀಯ ನೀತಿ ಸಂಹಿತೆ, ವಾಜಪೇಯಿ ಮತ್ತು ಗೋರಕ್ಷಣೆ, ಜೆಹಾದಿಗಳು ಮತ್ತು ಹಿಂದುತ್ವವಾದಿಗಳು ಇಬ್ಬರೂ ಒಬ್ಬ ರಾಕ್ಷಸನ ಎರಡು ಮುಖಗಳು, ಪ್ರತಿಭಟಿಸಲೇಬೇಕಾದ ಸಮಯ, ದೇಶ ಮತ್ತು ರಾಜಕೀಯ ಭಾಗದಲ್ಲಿ ನ್ಯಾಯಾಧೀಶರ ನೆತ್ತಿಗೆ ಹತ್ತಿಸಿದ ಗೂಬೆ, ಹಂತಕನ ವಿಚಾರಣೆಯಲ್ಲಿ “ಪಿತೂರಿಯೇ?, ಪಾಪ ಪ್ರಜ್ಞೆ ಬೆಳೆಸುವ ಕಾನೂನುಗಳು, 'ಬಿಲ್' ಕಾರ್ಯರೂಪದಲ್ಲಿ ಬಂದಾಗ, ಜನತಾ ಪಕ್ಷದ ಕರಾಳ ಭವಿಷ್ಯ, ಜನನಾಡಿಗೆ ಎಂದೂ ಸ್ಪಂದಿಸದ ಪತ್ರಕರ್ತರು, ವಂಶಾಡಳಿತಕ್ಕೆ ಒಗ್ಗಿದ ಭಾರತೀಯ, ಗುಟ್ಟು ಗೂಢಚರ್ಯೆ ಸೇರಿದಂತೆ 58 ಲೇಖನಗಳಿವೆ.
ದೇಶ ಮತ್ತು ಆರ್ಥಿಕತೆ ಭಾಗದಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮತ್ತು ಹಸಿರುಕ್ರಾಂತಿ, ಪತ್ರಿಕೆಗಳ ವಿಕೇಂದ್ರಿಕರಣ, ವಿಕೇಂದ್ರಿಕರಣ ಮತ್ತು ಬಾಂಗ್ಲಾ ಸಮಸ್ಯೆ, ಮಾರ್ಕ್ಸ್ನ ನಂತರದ ಚರಿತ್ರೆ ಮತ್ತು ಅರ್ಥಶಾಸ್ತ್ರ, ಆರ್ಥಿಕ ತಜ್ಞರ ಕಪಟ ನಾಟಕ, ಸಾಲವೇ ಆರ್ಥಿಕ ನೀತಿಯಾದಾಗ…, ಅರ್ಥಶಾಸ್ತ್ರಜ್ಞರಿಗೆ ಇದು ತಿಳಿದಿದೆಯೆ?, ಭಾರತದ ವಾಸ್ತವಕ್ಕೆ ಕಣ್ಣುತೆರೆಯದ ಅರ್ಥಶಾಸ್ತ್ರಜ್ಞರು (ಭಾಗ 1 ಮತ್ತು 2), ಬೂದಿಯಿಂದ ಮೇಲೆದ್ದ ದೈತ್ಯ ಜಪಾನ್ (ಭಾಗ 3), ವಿಶ್ವವಾಣಿಜ್ಯ ವೇದಿಕೆಯಲ್ಲಿ(ಭಾಗ 4), ಹಿಂದುಳಿದ ರಾಷ್ಟ್ರಗಳಲ್ಲಿ ಬದಲಾವಣೆಯ ಬವಣೆ(ಭಾಗ 5), ನಿರಂತರವಾಗಿ ಸುತ್ತುತ್ತಿರುವ ವಿಷವರ್ತುಲ(ಭಾಗ 6) ಇನ್ನೂ ಕುರುಡಾಗಿರುವ ಎರಡು ಗುಂಪುಗಳು(ಭಾಗ 9) ತಂತ್ರ ಗೊತ್ತಿಲ್ಲದ ಮಂತ್ರಗಳು, ನಿರಂತರ ಏರುವ ಜೀವನಮಟ್ಟ, ಸಭ್ಯ ಸಹನೀಯ ಜೀವನ ಮಟ್ಟ, ಸಂಡಿಗೆ ಪುರಾಣ, ಪೂರ್ವ ಸಿದ್ಧತೆ ಇಲ್ಲದ ಯೋಜನೆಗಳು, ಭ್ರಷ್ಟಾಚಾರ ಮತ್ತು ಅದಕ್ಷತೆ ಅವಳಿ ಮಕ್ಕಳಿದ್ದಂತೆ, ಪಾಪ ಚೀಟಿ ನಿಜಾಮರು!, ಪೆಟ್ರೋಲ್ ಕುಡುಕರು!, ಬಜೆಟ್ಟಿನ ತಾತ್ವಿಕ ನೆಲೆಗಟ್ಟು, ಕೇಂದ್ರ ಅಬ್ಯಾರಿ ಇಲಾಖೆ, ಆರ್ಥಿಕ ಪುನರುಜ್ಜಿವನ, ದೇಶದ ಪುನರಚನೆ, ತೇಜಸ್ವಿ ಕಂಡಂತೆ ಜಾಗತೀಕರಣ ಲೇಖನಗಳಿವೆ.
ಇನ್ನು ಈ ಕೃತಿಯಲ್ಲಿನ ಪರಿಸರ ಭಾಗದಲ್ಲಿ 17 ಲೇಖನಗಳು, ಶಿಕ್ಷಣ ಭಾಗದಲ್ಲಿ 4 ಲೇಖನಗಳು, ಸಾಹಿತ್ಯ ಭಾಗದಲ್ಲಿ 6 ಲೇಖನಗಳು, ಕೃಷಿ ಮತ್ತು ರೈತ ಸಮಸ್ಯೆಗಳು ಭಾಗದಲ್ಲಿ 30 ಲೇಖನಗಳು, ಕನ್ನಡ ನಾಡು ನುಡಿ ಭಾಗದಲ್ಲಿ 17 ಲೇಖನಗಳು ಹಾಗೂ ಭಾಷಣ ಮತ್ತು ಪ್ರತಿಕ್ರಿಯೆ ವಿಭಾಗದಲ್ಲಿ 18 ಲೇಖನಗಳಿವೆ.
©2024 Book Brahma Private Limited.