ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ-6

Author : ಕೆ.ಸಿ. ಶಿವಾರೆಡ್ಡಿ

Pages 456

₹ 720.00




Year of Publication: 2024
Published by: ಎಂ.ಮುನಿಸ್ವಾಮಿ ಅಂಡ್‌ ಸನ್ಸ್‌
Address: ಸರ್ವೋದಯ, #72, ಸರ್ವೇಯರ್‌ ರಸ್ತೆ, ಬಸವನಗುಡಿ, ಬೆಂಗಳೂರು-560004\n
Phone: 8026576228

Synopsys

‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 6’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಪರಿಸರ ಕಥನ: ಕಾಡಿನ ಕತೆಗಳ ಸಮಗ್ರ ಕೃತಿಯಾಗಿದೆ. ಇ‌ಲ್ಲಿ 1993ರಲ್ಲಿ ಪ್ರಕಟವಾದ ಕಾಡಿನ ಕಥೆಗಳು-1 ಕೆನೆತ್ ಆಂಡರ್ಸನ್ ಕಥೆಗಳ ಸಂಗ್ರಹ ಭಾವಾನುವಾದದ ಬೆಳ್ಳಂದೂರಿನ ನರಭಕ್ಷಕ; ಪಾತಾಳದಿಂದೆದ್ದ ಪಿಶಾಚಿ, ನರಭಕ್ಷಕನ ನಿರೀಕ್ಷೆಯಲ್ಲಿ, ಕತ್ತಲಲ್ಲಿ ಕೇಳಿದ ಚೀತ್ಕಾರ, ಹೆಣಕ್ಕೆ ಜೀವ ಬಂತೆ?, ಮತ್ತು ಷೇರ್ ಖಾನ್ ಭಾಗದಲ್ಲಿ ಪ್ರಕಟಗೊಂಡಿರುವ ಗುರಪ್ಪನ ಹಣೆಬರಹ, ದಾರಿಯಲ್ಲಿ ಅದೃಶ್ಯ ವೈರಿ, ರಕ್ತದ ಜಾಡಿನಲ್ಲಿ ಹಾಗೂ ವೈನಾಡಿನ ನರಭಕ್ಷಕ ಭಾಗದಲ್ಲಿ ಧೀರ ಯೇಗನ ಸಾಹಸ, ಮೃತ ದೇಹದ ಸಮೀಪದಲ್ಲಿ, ತಿಮ್ಮಯ್ಯನ ಯುದ್ಧ ನೃತ್ಯ ಗಳನ್ನು ಕಾಣಬಹುದಾಗಿದೆ.

1993 ರಲ್ಲಿ ಪ್ರಕಟಗೊಂಡ ಕೆನೆತ್ ಆಂಡರ್ಸನ್ ಕಥೆಗಳ ಸಂಗ್ರಹ ರೂಪಾಂತರ ಕಾಡಿನ ಕಥೆಗಳು-2 ರಲ್ಲಿ ಪೆದ್ದಚೆರುವಿನ ರಾಕ್ಷಸ!, ನರಬಲಿಗಳ ಸರಮಾಲೆ, ಇಂಗುತಿಂದು ಮಂಗನಾದ ಹುಲಿ, ತಲೆಹರಟೆ ಕಲ್ಲ ಆಹುತಿಯಾದ, ಅಪ್ಪ ಮತ್ತು ಅಡಿಯಪ್ಪ, ತಾಳವಾಡಿಯ ಮೂಕ ರಾಕ್ಷಸ ವಿಭಾಗದಲ್ಲಿ ಕೊಳ್ಳುವವನನ್ನು ಕೊಂದವರು ಯಾರು?, ನರಭಕ್ಷಕನೇ ಬಿಸಿಲುದುರೆಯೇ?, ಅತ್ತ ನರಭಕ್ಷಕ! ಇತ್ತ ಕಾಡಾನೆ!, ನಟನೆಗೆ ಮೋಸಹೋದ ಹುಲಿ, ಲಕ್ಕವಳ್ಳಿಯ ಹೆಬ್ಬುಲಿ ವಿಭಾಗದಲ್ಲಿ ಲಕ್ಕವಳ್ಳಿಯ ಹೆಬ್ಬುಲಿ ಬರಹವನ್ನು ಕಾಣಬಹುದು.

1994ರಲ್ಲಿ ಪ್ರಕಟಗೊಂಡ ಕೆನೆತ್ ಆಂಡರ್ಸನ್ ಕಥೆಗಳ ಸಂಗ್ರಹ ರೂಪಾಂತರ ಕಾಡಿನ ಕಥೆಗಳು-3ರಲ್ಲಿ ದಿಗುವಮೆಟ್ಟದ ಕೊಲೆಗಡುಕ ಭಾಗದಲ್ಲಿ ಅಲೀಮನ ನಾಯಿ, ಮಿಸ್‌ಛೀಪ್ ಮತ್ತು ಪ್ಯಾರಿ, ಕೊಲೆಗಡುಕನ ಕೊನೆ, ಮಂಚಿಹಳ್ಳಿಯ ಮುಗ್ಧರು ಕತಾಭಾಗದಲ್ಲಿ ಮೂವರ ನರಬಲಿ, ತಟ್ಟಿ ಎಬ್ಬಿಸಿದ ಹುಲಿ, ಹುಲಿ ಅಟ್ಟಿದ ಆನೆ, ಭಯಾನಕ ಮಮ್ಮಟವಾಯನ್ ಕತಾಭಾಗದಲ್ಲಿ ಢಕಾಯತನ ಪೂರ್ವೋತ್ತರ, ಢಕಾಯತನ ಸನ್ನಿಧಿಯಲ್ಲಿ, ಜಾಲಹಳ್ಳಿಯ ಕುರ್ಕ ಕತಾಭಾಗದಲ್ಲಿ ಜಾಲಹಳ್ಳಿಯ ಕುರ್ಕ ಕತೆಗಳನ್ನು ಕಾಣಬಹುದು. ಕೆನೆತ್ ಆಂಡರ್ಸನ್ ಕಥೆಗಳ ಸಂಗ್ರಹ ರೂಪಾಂತರ ಕಾಡಿನ ಕಥೆಗಳು-4ರಲ್ಲಿ ಮುನಿಶಾಮಿ ಮತ್ತು ಮಾಗಡಿ ಚಿರತೆ, ಅಲ್ಲಾಭಕ್ಷಿಯ ಪುಂಡುಕರಡಿ, ಬಾಳೆತೋಟದ ಸ್ವಾಮಿ, ರಾಂಪುರದ ಒಕ್ಕಣ್ಣ ಕತೆಗಳಿವೆ.

1995ರಲ್ಲಿ ಪ್ರಕಟಗೊಂಡ ರುದ್ರಪ್ರಯಾಗದ ಭಯಾನಕ ನರಭಕ್ಷಕ ಜಿಮ್ ಕಾರ್ಬೆಟ್ 'ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್' ಕೃತಿಯ ಭಾವಾನುವಾದದಲ್ಲಿ ಯಾತ್ರಿಕರ ದುರ್ಗಮ ದಾರಿ, ನರಭಕ್ಷಕ, ಭೀತಿ, ಅಂಧಶ್ರದ್ಧೆ, ವ್ಯರ್ಥ ಪ್ರಯತ್ನಗಳು, ರುದ್ರಪ್ರಯಾಗದತ್ತ ಪಯಣ, ಸಮೀಕ್ಷೆ, ಮೊದಲ ನರಬಲಿ, ಝೂಲ, ದುರದೃಷ್ಟದ ಕಾಳರಾತ್ರಿ, ಮಂತ್ರ ಮಾಟಗಳ ಭೂತೋಚ್ಚಾಟನೆ, ನುಣಿಚಿಕೊಂಡ ಚಿರತೆ, ಕಾಲ ಕೆಳಗೆ ತೆವಳಿದ ನರಭಕ್ಷಕ, 'ಜಿನ್‌ ಕತ್ತರಿ'ಯಲ್ಲಿ ಚಿರತೆ, ಬೆಂಬತ್ತಿದ ಭೂತ'ಗಳು' ಮಹಾಶಯ, ಮಹಷೀ‌, ಪ್ರಾಣ ಉಳಿಸಿದ ಬೆಂಕಿ ಪೊಟ್ಟಣ, ಕರಗಿದ ಆಸೆ, ಅರಗಿದ ಪಾಷಾಣ, ನಡುಬೀದಿಯ ನರಬಲಿ, ಚಕ್ರವ್ಯೂಹ, ಚಿರತೆಗೆ ಆಕಸ್ಮಿಕಗಳ ಅದೃಷ್ಟ, ಮುದುಕನ ಆತ್ಮವಿಶ್ವಾಸ, ಅಪ್ಪಳಿಸಿದ ಹಿಮಮಾರುತ, ಕಾಳರಾತ್ರಿ, ಕೊಟ್ಟಕೊನೆಯ ನರಹತ್ಯೆ, ಕರಾಳ ದುಃಸ್ವಪ್ನದ ಕೊನೆ ಕತೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷವಿದೆ.

About the Author

ಕೆ.ಸಿ. ಶಿವಾರೆಡ್ಡಿ
(01 June 1961)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...

READ MORE

Related Books