`ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ-13’ ಮಿಂಚುಳ್ಳಿ, ಹೆಜ್ಜೆ ಮೂಡದ ಹಾದಿ, ಹಕ್ಕಿ ಪುಕ್ಕ, ಮಾಯೆಯ ಮುಖಗಳ ಸಮಗ್ರ ಕೃತಿಯಾಗಿದೆ. ಇಲ್ಲಿ ಮಿಂಚುಳ್ಳಿಯ, ಮಿಂಚುಳ್ಳಿ, ಮಂಗಟೆ ಹಕ್ಕಿ, ಜೇನು ಕುಟುರಗಳು, ಜೇನು ಮಗರೆ, ನೆಲ ಕುಟುಕ, ಟೌಕ್ಯಾನ್ ಮತ್ತು ಹನಿಗೈಡ್ ಹಕ್ಕಿಗಳು, ಮರಕುಟುಕಗಳು, ಕುಟುರನ ಹಕ್ಕಿಗಳು, ಪಾರಿವಾಳಗಳು, ಕಾಡು ಪಾರಿವಾಳಗಳು, ಚೋರೆ, ಮನಿಯಾಡಲು, ಗುಮ್ಮಾಡಲು ಹಕ್ಕಿಗಳು, ಹಮ್ಮಿಂಗ್ ಹಕ್ಕಿಗಳು, ಬಾಳೆಗುಬ್ಬಿ, ಹೂ ಕುಟುಕ, ಬಿಳಿಗಣ್ಣಿನ ಚಿಟ್ಟಗುಬ್ಬಿ, ಅಂಬರದ ಹಕ್ಕಿಗಳು, ಕೋಗಿಲೆ ಮತ್ತು ಕೆಂಬೂತ ಹಕ್ಕಿಗಳ ವಿಚಾರಗಳನ್ನು ಕಾಣಬಹುದು. ಹೆಜ್ಜೆ ಮೂಡದ ಹಾದಿಯಲ್ಲಿ ಸೌರಲೋಪಸ್, ಜವುಗಿನ ಹಕ್ಕಿಗಳು, ಗಿಳಿಗಳು, ಹೆಜ್ಜೆಮೂಡದ ಹಾದಿ, ಗುಬ್ಬಿಗಳು, ಗೀಜುಗನ ಗೂಡು, ಟ್ರೋಜನ್ ಮತ್ತು ಆಫ್ರಿಕಾದ ಮೂಷಿಕ, ಮುನಿಯ, ಕಾಡುಕೋಳಿಗಳು, ಚಿಟ್ಟುಕೋಳಿಗಳು, ನೀರಿನ ಹಕ್ಕಿಗಳು, ಕಾಡುಬಾತುಗಳು, ಗೋರೆಹಕ್ಕಿಗಳು, ಪಿಕಳಾರಗಳು, ನೀಲಿ ಸಿಳ್ಳಾರ, ಟುವ್ವಿಹಕ್ಕಿ, ಮಡಿವಾಳ ಹಕ್ಕಿ ವಿಚಾರಗಳಿವೆ. ಹಕ್ಕಿ ಪುಕ್ಕದಲ್ಲಿ ಬಾಯ್ಕಳಕ, ದಾಸ ಕೊಕ್ಕರೆ, ಕೆಬ್ಬೆ ಕೊಕ್ಕರೆ, ಜೋಳಿಗೆ ಕೊಕ್ಕ, ಬಿಳಿ ಕುತ್ತಿಗೆ ನೀರುಕಾಗೆ, ಚಮಚದ ಕೊಕ್ಕು, ಕೊಕ್ಕರೆ, ಬೆಳ್ಳಕ್ಕಿ, ಜಾನುವಾರು ಬೆಳ್ಳಕ್ಕಿ, ಬೂದು ಕೊಕ್ಕರೆ, ಹಸುರು ಗುಪ್ಪಿ, ಕತ್ತಲಗುಪ್ಪಿ, ನವಿಲು, ಬಸ್ಟರ್ಡ್, ದಾಸ ಗೋರೆ, ಕಾಡುಕೋಳಿ(ಹುಂಜ), ಚಿಟ್ಟು ಕೋಳಿ, ಗೌಜುಗನ ಹಕ್ಕಿ, ಬಟೇರ, ಕೆಂಮ್ಮಂಡೆ ರಣಹದ್ದು, ಬೂದಿಮಂಡೆ ರಣಹದ್ದು, ಜಾಡಮಾಲಿ ಹದ್ದು, ಕಪ್ಪು ಗರುಡ, ಬಿಳಿ ಗರುಡ, ಚೊಟ್ಟಿ ಗರುಡ, ಮೀನು ಗರುಡ, ಹಕ್ಕಿ ಸೆಳೆವ, ಕರಿರೆಕ್ಕೆ ಚಾಣ, ಹಾವು ಗಿಡುಗ, ಡೇಗೆ, ಚೋರೆಹಕ್ಕಿ ಚಾಣ, ಬಾಲ ಗೋರೆ, ಪಟ್ಟೆ ಗೋರೆ, ಬಣ್ಣದ ಗೋರೆ, ನಾಮ ಗೋರೆ, ಚರ್ಲೆ ಅಥವಾ ಸರಳೆ ಸೇರಿದಂತೆ 191 ಹಕ್ಕಿಗಳ ಬಗೆಗಿನ ಮಾಹಿತಿಯನ್ನು ನೀಡಲಾಗಿದೆ.
ಮಾಯೆಯ ಮುಖಗಳು ಭಾಗದಲ್ಲಿ ಪೊದೆಯ ಹಕ್ಕಿ ಎದೆಯ ಹಕ್ಕಿ, ಮಂಗಟ್ಟೆ ಮೀಮಾಂಸೆ, ಮೇಘ ಮಲ್ಹಾರ, ಮಾಯೆಯ ಮುಖಗಳು, ಚಲಿಸುವ ಮಿಸ್ಟರ್ ಮುಳ್ಳು, ಅಪರಂಜಿ ಹೂವಿನ ಹಕ್ಕಿ, ಒಂದು ಮುದಿ ರೆಂಬೆಯ ಕೊನೆಯ ಗಾನ, ಗೀಜಗನ ಗೂಡು, ಹಕ್ಕಿ ಹಾರುತಿದೆ ನೋಡಿದಿರಾ?, ಟುವ್ವಿ ಹಕ್ಕಿಯ ಗೂಡು, ಕಸ್ಟಡಿಯಲ್ಲಿರುವ ಇಷ್ಟ ದೇವತೆಗಳು, ಕರ್ನಾಟಕದ ಕಿಲಿಮಂಜಾರೊ ಗಿರಿ, ಝೇಂಕರಿಸುವ ರೆಕ್ಕೆಗಳು, ಮಳೆಗಾಲದ ಚಿತ್ರಗಳು, ಚಾರ್ಮುಡಿ ಗಿರಿ ಶ್ರೇಣಿ, ಹುಂಡುಕೋಳಿಯ ಪುನರಾಗಮನ, ಮಾಡಿನ ಗೂಡು, ಮಮತೆಯ ಪಿಕಳಾರ ಒಂದು ದೃಶ್ಯಕಾವ್ಯ, ಹಣ್ಣು ಕಳ್ಳರು(ಗಿಣಿ ರಾಮ), ಹೂವು ಚೆಲ್ಲಿದ ಹಾದಿಯಲ್ಲಿ, ಚೋರ ಹಕ್ಕಿಯೂ ಚೋರ ಕಪ್ಪೆಯೂ ಸೇರಿದಂತೆ 33 ಲೇಖನಗಳನ್ನು ಕಾಣಬಹುದಾಗಿದೆ. ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೆಲವು ಮೊದಲ ಮುದ್ರಣದ ಕೆಲವು ಮುಖಪುಟಗಳು, ಲೇಖನ ಸೂಚಿ, ಚಿತ್ರ-ಲೇಖನ ಅಕಾರಾದಿ, ಚಿತ್ರ-ಲೇಖನ ಸೂಚಿಯನ್ನು ಕಾಣಬಹುದು.
©2024 Book Brahma Private Limited.