‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 11’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಜಾಗತಿಕ ಕಥನಗಳ ಮಿಲನಿಯಂ ಸರಣಿ ಭಾಗ-3 ಸಮಗ್ರ ಕೃತಿಯಾಗಿದೆ.
ಇಲ್ಲಿ ವಿಸ್ಮಯ ವಿಶ್ವ-1, ಮಹಾಪಲಾಯನ, ವಿಸ್ಮಯ ವಿಶ್ವ-2, ಅಡ್ವೆಂಚರ್ ಭಾಗಗಳನ್ನು ವಿಗಂಡಿಸಲಾಗಿದೆ. ವಿಸ್ಮಯ ವಿಶ್ವ-1 ರಲ್ಲಿ ಕೊಮೋಡೋ ಡ್ರೇಗನ್, ಚಂದ್ರಸ್ಸಿರಿಯ ಆಮೆಮರಿಗಳು, ಅತಿಬುದ್ಧಿಯ ಅವಿವೇಕಿ, ನೌರು ದ್ವೀಪದ ದುರಂತ, ಚಕ್ರವರ್ತಿಯ ಕಗ್ಗೊಲೆ, ನಾನೇ ಅನಾಸ್ತಾಷಿಯ, ಟುರಿನ್ ಶಾಲಿನ ರಹಸ್ಯ, ಮಹಾಪಲಾಯನದಲ್ಲಿ ಸ್ಲಾವೋಮಿರ್ ರಾವಿಸ್ ರವರ ‘ದಿ ಲಾಂಗ್ ವಾಕ್’, ಪುಸ್ತಕದ ಸಂಗ್ರಹ ಭಾವಾನುವಾದಗಳನ್ನು ನೀಡಲಾಗಿದೆ.
ವಿಸ್ಮಯ ವಿಶ್ವ-2ರಲ್ಲಿ ಇಂಗ್ಲೆಂಡಿನ ರಹಸ್ಯ ಗದ್ದೆ ವೃತ್ತಗಳು, ಇತಿಹಾಸದ ಭೀರಕ ಕ್ಷಾಮ, ಸಿಕ್ಕಿಬಿದ್ದ ಮಗು, ಟೈಟಾನಿಕ್ ಸಮಾಧಿಯ ಅನ್ವೇಷಣೆ, ನಾಗರಿಕತೆಯನ್ನೇ ನಾಶ ಮಾಡಿದ ಸಿಡುಬು, ಬ್ರೆಜಿಲ್ಲಿನ ಕೊಲೆಗಡಕ ಜೇನುಗಳು, ಐಸ್ ಮ್ಯಾನ್ ‘ಓಟ್ಸಿ’, ಭತ್ತದ ಬುಟ್ಟಿ, ಸಗುವಾರಾ ಕಳ್ಳಿ ವಿಚಾರಗಳನ್ನು ನೀಡಲಾಗಿದೆ. ಅಡ್ವೆಂಚರ್ ವಿಭಾಗದಲ್ಲಿ ಅಡ್ವೆಂಚರ್, ಸ್ಕೈವಿಂಕೀಸ್, ಸೋಲ್ಜರ್ ಇಲಿ, ರುಪುನುಡಿ, ಕರನಾಂಬೊ, ಖೇಮ್ಯಾನ್, ಕಫೈಬರ, ಕ್ಯ್ರಾಬ್ ಡಾಗ್, ಪಿಪ್ಪಾ ಕಪ್ಪೆ, ಪಿಂಪಾಲ ಹಾಗ್ ಗಳನ್ನು ಇಲ್ಲಿ ಕಾಣಬಹುದು. ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷವಿದೆ.
©2024 Book Brahma Private Limited.