ಮೊದಲ ಸಂಪುಟ
ಕನ್ನಡಿಗರಿಗೆ ಸಂಬಂಧಿಸಿದ ’ಮಾಧವ ಕರುಣಾ ವಿಲಾಸ' ಎಂಬ ಕಾದಂಬರಿ ಈ ಸಂಪುಟದಲ್ಲಿದೆ. ಗಳಗನಾಥರು ಈ ಕಾದಂಬರಿಯನ್ನು 1923ರಲ್ಲಿ ರಚಿಸಿದ್ದರು.
ಎರಡನೆಯ ಸಂಪುಟ
ಕನ್ನಡಿಗರ ಕರ್ಮಕಥೆ, ಕುಮುದಿನಿ, ದುರ್ಗದ ಬಿಚ್ಚುಗತ್ತಿ ಕಾದಂಬರಿಗಳನ್ನು ಸೇರಿಸಲಾಗಿದೆ. ಗಳಗನಾಥರು ಈ ಕಾದಂಬರಿಗಳನ್ನು 1916ರಿಂದ 1938ರ ಅವಧಿಯಲ್ಲಿ ರಚಿಸಿದ್ದರು.
ಮೂರನೆಯ ಸಂಪುಟ
ಈಶ್ವರೀ ಸೂತ್ರ, ಮರಾಠರ ಅಭ್ಯುದಯ, ಕಮಲಕುಮಾರಿ, ಛತ್ರಪತಿ ಇವು ಈ ಸಂಪುಟದಲ್ಲಿವೆ. ಈ ಸಂಪುಟದಲ್ಲಿರುವ ಕಾದಂಬರಿಗಳು 1913 ರಿಂದ 1919ರ ಅವಧಿಯಲ್ಲಿ ರಚಿಸಿದ್ದರು.
ನಾಲ್ಕನೆಯ ಸಂಪುಟ
ಗೃಹ ಕಲಹ, ಶಿವಪ್ರಭುವಿನ ಪುಣ್ಯ, ಸ್ವರಾಜ್ಯ ಸುಗಂಧ, ಕುರುಕ್ಷೇತ್ರ ಕಾದಂಬರಿಗಳು ಈ ಸಂಪುಟದಲ್ಲಿವೆ, ಗಳಗನಾಥರು ಈ ಕಾದಂಬರಿಗಳನ್ನು 1918ರಿಂದ 1938ರ ಅವಧಿಯಲ್ಲಿ ರಚಿಸಿದ್ದರು.
ಐದನೆಯ ಸಂಪುಟ
ಕ್ಷಾತ್ರತೇಜ , ತತ್ವಸಾರ ,ತಿಲೋತ್ತಮ , ಧಾರ್ಮಿಕ ತೇಜ , ರಾಣಾ ರಾಜಸಿಂಹ ಕಾದಂಬರಿಗಳನ್ನು ಗಳಗನಾಥರು 1914 ರಿಂದ 1928ರ ಅವಧಿಯಲ್ಲಿ ರಚಿಸಿದ್ದರು.
ಆರನೆಯ ಸಂಪುಟ
ಪ್ರಬುದ್ಧ ಪದ್ಮನಯನೆ , ರಾಣಿ ಮೃಣಾಲಿನಿ ,ವೈಭವ , ಧರ್ಮರಹಸ್ಯ , ಸಂಸಾರ ಸುಖ. ಈ ಕಾದಂಬರಿಗಳನ್ನು ಗಳಗನಾಥರು 1898 ರಿಂದ 1926ರ ಅವಧಿಯಲ್ಲಿ ರಚಿಸಿದ್ದರು.
©2024 Book Brahma Private Limited.