‘ಎಲ್ಲ ಕತೆ, ಕಾದಂಬರಿಗಳು’ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಎಲ್ಲ ಕತೆ, ಕಾದಂಬರಿಗಳ ಸಂಕಲನ. ಈ ಕೃತಿಯಲ್ಲಿ ಪತ್ರಕರ್ತ ಪಿ. ಲಂಕೇಶ್ ಅವರ ಬೆನ್ನುಡಿ ಇದೆ. ಮಹಾದೇವ ಅವರ ಬಗ್ಗೆ ಬರೆಯುತ್ತಾ ‘ನಾನು ಕಳೆದ ಇಪ್ಪತ್ತೈದು ವರ್ಷದಿಂದ ಬಲ್ಲಂತೆ ದೇವನೂರ ಮಹದೇವ ಸೋಮಾರಿತನದ, ಡೋಲಾಯಮಾನದ, ಹಿಂಜರಿಕೆಯ ವ್ಯಕ್ತಿ; ಇದೆಲ್ಲದರ ಆಳದಲ್ಲಿ ಹರಿತವಾದ ಸೂಕ್ಷ್ಮ ಮನಸ್ಸಿನ ನ್ಯಾಯವಂತ ಮನುಷ್ಯ ಕೂಡ’ ಎನ್ನುತ್ತಾರೆ. ತಳಸಮುದಾಯಗಳ ದನಿಯಾಗಿ ಬರೆವ ದೇವನೂರು ಮಹಾದೇವರ ಕೃತಿಗಳ ಸಂಕಲನವಾದ ಈ ಕೃತಿ, ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಿದೆ. ಈ ಮೊದಲು ಕೃತಿಯು 1992ರಲ್ಲಿ ಮುದ್ರಣಗೊಂಡಿತ್ತು.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ...
READ MORE