ಡಾ. ಎಲ್. ಹನುಮಂತಯ್ಯನವವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವಾದ ಈ ಕೃತಿ ಅವರ ಕಾವ್ಯ, ನಾಟಕ ಹಾಗೂ ಮಹಾಪ್ರಬಂಧವನ್ನು ಹೊಂದಿದೆ.
’ಬಂಡಾಯ ಕತೆಗಳಲ್ಲಿ ದಲಿತಪ್ರಜ್ಞೆ’ ಅವರ ಸಂಶೋಧನಾ ಪ್ರಬಂಧ. ಅಷ್ಟೇ ಅಲ್ಲದೆ ಬಂಡಾಯ ಸಾಹಿತ್ಯ ಚಳವಳಿಯನ್ನು ಅದರ ಸ್ವರೂಪ, ಸಾಧ್ಯತೆಗಳೊಂದಿಗೆ ಕಟ್ಟಿಕೊಡುತ್ತದೆ. ಬಂಡಾಯ ಸಾಹಿತ್ಯವನ್ನು ಅರಿಯುವವರಿಗೂ ಇದು ಉಪಯುಕ್ತ ಪ್ರಬಂಧ.
ಕನಕದಾಸನನ್ನು ಸಹಜ ಸಂತನೆಂಬಂತೆ ಅವರ ಒಂದು ಕೃತಿ ಚಿತ್ರಿಸುತ್ತದೆ. ಚರಿತ್ರೆ ಪುರಾಣವಾಗಿಬಿಡುವ ಅಪಾಯವನ್ನು ಅವರು ಬಲ್ಲವರಾದ್ದರಿಂದ ಅತ್ಯಂತ ಕರಾರುವಕ್ಕಾಗಿ ಕನಕದಾಸನನ್ನು ಕಟೆದಿದ್ದಾರೆ ಅವರು. ’ಕಪ್ಪು ಕಣ್ಣಿನ ಹುಡುಗಿ’,’ಅವ್ವ ಅವ್ವನ ಕವಿತೆ’ಯಂತಹ ಕೃತಿಗಳ ಹಲವು ಕವಿತೆಗಳು ಸಂಪುಟದಲ್ಲಿವೆ.
ರಾಜ್ಯಸಭಾ ಸದಸ್ಯರಾಗಿರುವ ಎಲ್. ಹನುಮಂತಯ್ಯ ಪ್ರಮುಖ ಕವಿಗಳಲ್ಲಿ ಒಬ್ಬರು. ಬೆಂಗಳೂರು ಜಿಲ್ಲೆ ರಾಮೇಶ್ವರ ಗ್ರಾಮದವರಾದ ಅವರು ಮೊದಲಿಗೆ ಬ್ಯಾಂಕ್ ನೌಕರಿಯಲ್ಲಿದ್ದರು. ಸೃಜನಶೀಲ ಸಾಹಿತಿ, ವಾಗ್ಮಿ ಹಾಗೂ ವಿಮರ್ಶಕ ಆಗಿರುವ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. 'ಕಪ್ಪು ಕಣ್ಣಿನ ಹುಡುಗಿ', 'ಅವ್ವ (ಕವಿತಾ ಸಂಕಲನ); 'ಅಂಬೇಡ್ಕರ್ ಕವನಗಳು’ (ಸಂಪಾದನೆ) 'ದಲಿತ ಲೋಕದ ಒಳಗೆ' (ವಿಮರ್ಶೆ), ಅಂಬೇಡ್ಕರ್' (ನಾಟಕ) ಪ್ರಕಟಿತ ಕೃತಿಗಳು. ಅವರ ಸಮಗ್ರ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಅವರು ಜನಪರ ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ...
READ MORE