ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಸಂಪುಟಗಳಿಂದ ಆಯ್ದ ಬರಹಗಳನ್ನು ಈ ಸಂಪುಟವು ಒಳಗೊಂಡಿದೆ. ಅಂಬೇಡ್ಕರ್ ಅವರ ವಿಚಾರಗಳು ಕೃತಿಯನ್ನು ಹಿರಿಯ ವಿಮರ್ಶಕ ಎಚ್. ದಂಡಪ್ಪ ಅವರು ಸಂಪಾದಿಸಿದ್ದಾರೆ. ಅಂಬೇಡ್ಕರ್ ಬರೆಹಗಳಿಗೆ ದಂಡಪ್ಪ ಅವರು ಬರೆದಿರುವ ಪ್ರಸ್ತಾವನೆ ರೂಪದ ಪ್ರವೇಶಿಕೆ ಗಮನ ಸೆಳೆಯುತ್ತದೆ.
ಅಂಬೇಡ್ಕರ್ ಅವರು ಅನೇಕ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಬರೆದ ಬರೆಹಗಳು ಇಲ್ಲಿವೆ. ಅಂಬೇಡ್ಕರ್ ಅವರ ಆಲೋಚನಾ ವಿಧಾನಗಳ ಅಧ್ಯಯನ ವಿಧಾನಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತದೆ. ಜಾತಿ, ಅಸ್ಪೃಶ್ಯತೆ, ಸಂವಿಧಾನ, ಹಿಂದೂ ಧರ್ಮ, ಸಮಾನತೆ, ಪ್ರಜಾಪ್ರಭುತ್ವ, ಅಂಬೇಡ್ಕರರ ರಾಷ್ಟ್ರೀಯ ಮನೋಭಾವ, ಗಾಂಧಿ ಅಂಬೇಡ್ಕರ್ ನಡುವಣ ಸಂಘರ್ಷದ ಸ್ವರೂಪ, ಜಾತಿ ಮತ್ತು ಅದರ ಸ್ವರೂಪ, ಶೂದ್ರರು, ಅಸ್ಪೃಶ್ಯತೆ, ಧರ್ಮ ಮುಂತಾದ ಸಂವಿಧಾನ, ಮಹಿಳೆಯರ ಸ್ಥಾನಮಾನ, ಕೋಮು ಸಮಸ್ಯೆ, ಆರ್ಥಿಕ ಸಮಸ್ಯೆಗಳನ್ನು ಕುರಿತು ಬಾಬಾ ಸಾಹೇಬರ ಬರವಣಿಗೆಯಿಂದ ಸಂಗ್ರಹಿಸಿದ ಪ್ರಾತಿನಿಧಿಕ ಸಂಪುಟ.
©2024 Book Brahma Private Limited.