ಅಂಬೇಡ್ಕರರು ಆಧುನಿಕ ಭಾರತಕ್ಕೆ ನೀಡಿರುವ ಸ್ಮರಣೀಯ ಕೃತಿಗಳಾದ ಶೂದ್ರರು ಯಾರು? ಮತ್ತು ಅಸ್ಪೃಶ್ಯರು ಯಾರು? ಎಂಬ ಎರಡೂ ಕೃತಿಗಳು ಇಪ್ಪತ್ತನೆಯ ಶತಮಾನದ ಮುಖ್ಯ ವಿಚಾರಧಾರೆಯಲ್ಲಿ ವ್ಯಕ್ತಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕೊಡಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ. ಇದು ಇಂಥ ಮಹತ್ತರ ಕೃತಿಗಳ ಸಂಯುಕ್ತ ಸಂಚಿಕೆಯಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬಲವಾಗಿ ಹಿಡಿದಿಟ್ಟಿರುವ ಮತ್ತು ಸದಾ ನಿಯಂತ್ರಿಸುತ್ತಿರುವ ಜಾತಿ ಪದ್ಧತಿಯನ್ನು ಕುರಿತ ವಿಮರ್ಶೆಯನ್ನು ಒಳಗೊಂಡಿದೆ. ಶೂದ್ರರು ಯಾರು, ಅವರ ಉಗಮ, ಅವರ ಸ್ಥಾನಮಾನದ ಬಗ್ಗೆ ಬ್ರಾಹ್ಮಣರ ವಾದ, ವರ್ಣವ್ಯವಸ್ಥೆ, ಬ್ರಾಹ್ಮಣರು ಮತ್ತು ಶೂದ್ರರು, ಹಿಂದೂಗಳಲ್ಲಿ ಮತ್ತು ಹಿಂದೂಗಳಲ್ಲದವರಲ್ಲಿ ಅಸ್ಪೃಶ್ಯತೆ, ಅಸ್ಪೃಶ್ಯರ ಉಗಮ, ಆಧಾರ, ಸಿದ್ಧಾಂತಗಳು, ಅವರ ಸಮಸ್ಯೆ ಇವುಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ. ಪಾಕಿಸ್ತಾನದ ಸಮಸ್ಯೆಗಳು, ಪಾಕಿಸ್ತಾನದ ಪರ ಮುಸಲ್ಮಾನರ ವಾದ, ಪಾಕಿಸ್ತಾನ ಮತ್ತು ಕೋಮುಶಾಂತಿ, ಪಾಕಿಸ್ತಾನದ ಸಾಮಾಜಿಕತೆ, ಕೋಮು ಆಕ್ರಮಣ, ಪಾಕಿಸ್ತಾನದ ಅಸ್ತಿತ್ವದ ಪ್ರಶ್ನೆ, ಪಾಕಿಸ್ತಾನದ ಸಮಸ್ಯೆಗಳ ಬಗೆಗೂ ವಿವರಗಳನ್ನು ಒಳಗೊಂಡಿದೆ.
©2024 Book Brahma Private Limited.