ಡಾ. ಬಿ.ಆರ್. ಅಂಬೇಡ್ಕರ್ ಅವರು ಧರ್ಮದ ಬಗೆಗೆ ನಡೆಸಿದ ಆಳವಾದ ಚಿಂತನೆಗಳು ಈ ಸಂಪುಟದಲ್ಲಿ ಇದೆ. ಹಿಂದೂ ಧರ್ಮದಲ್ಲಿನ ತತ್ತ್ವಜ್ಞಾನ, ಹಿಂದೂ ಸಮಾಜ ವ್ಯವಸ್ಥೆ, ಅದರ ಮೂಲತತ್ವ, ಲಕ್ಷಣ, ಹಿಂದೂ ಧರ್ಮದ ಸಂಕೇತಗಳು, ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಅವುಗಳಿಗೆ ಪ್ರತಿಯಾಗಿ ನಡೆದ ಕ್ರಾಂತಿ, ಬೌದ್ಧಧರ್ಮದ ಪತನ ಹಾಗೂ ಅವಸಾನ, ಭಾರತದಲ್ಲಿ ಬ್ರಾಹ್ಮಣರ ಸಾಹಿತ್ಯ, ಅವರ ಧರ್ಮದ ದಿಗ್ವಿಜಯ, ಹಿಂದೂ ಗೃಹ್ಯಸೂತ್ರಗಳಲ್ಲಿನ ನೀತಿ, ನಿಯಮಗಳು, ಕೃಷ್ಣ ಮತ್ತು ಅವನು ಬೋಧಿಸಿದ ಭಗವದ್ಗೀತೆಯನ್ನು ಕುರಿತ ಅಂಬೇಡ್ಕರರ ಅಭಿಪ್ರಾಯಗಳು, ಮಹಾಭಾರತದ ಕೆಲವು ವಿಷಯಗಳ ವಿಶ್ಲೇಷಣೆ, ಶೂದ್ರರು ಮತ್ತು ಸ್ತ್ರೀಯರ ಪ್ರತಿಕ್ರಾಂತಿ, ಇಷ್ಟೇ ಅಲ್ಲದೆ, ಬುದ್ಧ ಮತ್ತು ಮಾರ್ಕ್ಷ್ ನಡುವಿನ ಹೋಲಿಕೆ, ವೇದಗಳು, ತ್ರಿಮೂರ್ತಿಗಳ ಸತ್ಯಸ್ವರೂಪ, ಮನುವಿನ ವಿಚಾರ, ವರ್ಣಾಶ್ರಮ, ಬ್ರಹ್ಮ, ಕಲಿಯುಗ, ರಾಮ ಕೃಷ್ಣರನ್ನು ಈ ಎಲ್ಲಾ ವಿಷಯಗಳ ಕುರಿತ ಮಾಹಿತಿಯನ್ನು ಈ ಕೃತಿಯೂ ಒದಗಿಸುತ್ತದೆ.
©2024 Book Brahma Private Limited.