ದೇವಯ್ಯ ಹರವೆ ಬದುಕಿದ್ದು ನಲವತ್ತು ವರ್ಷ ಮಾತ್ರ. ಆದರೆ ಅವರ ಪ್ರಖರ ವೈಚಾರಿಕ ಪ್ರಜ್ಞೆ ಈಗಲೂ ನಿಗಿನಿಗಿಸುತ್ತಿದೆ. ಅಧ್ಯಯನಶೀಲತೆಯೇ ಅವರ ವಿಚಾರ ಮಂಡನೆಯ ಅಂತಸತ್ವವಾಗಿತ್ತು. ಪ್ರಾಚೀನ ಗ್ರಂಥಗಳ ಬಗ್ಗೆ ಅವರು ಹೊಂದಿದ್ದ ಪಾಂಡಿತ್ಯ ಅನನ್ಯವಾದುದು. ಜನಪದ ಕ್ಷೇತ್ರ ಅಧ್ಯಯನದಲ್ಲೂ ಸಾಕಷ್ಟು ಕೃಷಿ ಮಾಡಿದ್ದರು ಹರವೆ. ಚಿಕ್ಕದಣ್ಣಾಯಕ ಚನ್ನಬಸವಣ್ಣ: ಒಂದು ಜನಾಂಗಿಕ ಹಿನ್ನೆಲೆ', 'ಭಗವದಜ್ಜುಕೀಯ ಮತ್ತು ಸೂಳೆ ಸನ್ಯಾಸಿ' ಮುಂತಾದ ಅವರ ಮಹತ್ವದ ಲೇಖನಗಳು ಕೃತಿಯಲ್ಲಿವೆ.
ಮಹೇಶ್ ಹರವೆ ಕೃತಿಯನ್ನು ಸಂಪಾದಿಸಿದ್ದಾರೆ.
ಸಾಹಿತಿ ಬಿ. ಮಹೇಶ್ ಹರವೆ ಅವರು ಮೈಸೂರು ಜಿಲ್ಲೆಯ ಕೆ.ಆರ್. ಪೇಟೆಯ ತೆಂಡೆಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು. ಸದ್ಯ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ದೇವಯ್ಯ ಹರವೆ ಸಮಗ್ರ ಸಾಹಿತ್ಯ ಸಂಪುಟ ಕೃತಿಯನ್ನು ಸಂಪಾದಿಸಿದ್ದಾರೆ. ಪ್ರಶಸ್ತಿಗಳು: 2022ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ ...
READ MORE