ಡಾ. ಪಂಡಿತ ತಾರಾನಾಥರ ಸಮಗ್ರ ಸಾಹಿತ್ಯದ ಸಂಪುಟ-3; ಈ ಕೃತಿಯನ್ನು ಲೇಖಕರಾದ ಎಂ.ಧ್ರುವನಾರಾಯಣ ಹಾಗೂ ಕಿ.ರಂ. ನಾಗರಾಜ ಅವರು ಸಂಪಾದಿಸಿದ್ದಾರೆ. ಪಂಡಿತ ತಾರಾನಾಥರ ಸಾಹಿತ್ಯವು ವಿಶೇಷವಾಗಿ ತಾರ್ಕಿಕ, ವೈಚಾರಿಕ, ವೈಜ್ಞಾನಿಕವಾದದ್ದು. ಮನೋವಿಶ್ಲೇಷಣಾತ್ಮಕವೂ ಆಗಿದೆ. ಇಂತಹ ಗಂಭೀರ ಸಾಹಿತ್ಯವು ಕನ್ನಡ ನಾಡಿಗೆ ಉತ್ತಮ ಸೇರ್ಪಡೆಯೂ ಆಗಿದೆ. ಇಂತಹ ಸಾಹಿತ್ಯವನ್ನು ಸಮಗ್ರವಾಗಿ ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
ಹಿರಿಯ ವಿದ್ವಾಂಸ ಎಂ. ಧ್ರುವನಾರಾಯಣ ಅವರು ಜನಿಸಿದ್ದು ನಾರಾಯಣದೇವರಕೆರೆಯಲ್ಲಿ. ರಾಯಚೂರಿನ ಪಂಡಿತ್ ತಾರಾನಾಥ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತರಾಗಿ ಬೆಂಗಳೂರು ನಿವಾಸಿಯಾಗಿದ್ದಾರೆ. ಜೀವನ ಚರಿತ್ರೆ ಅನುವಾದ ಕ್ಷೇತ್ರಗಳಲ್ಲದೆ ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ. ರಾವ್ ಬಹದ್ದೂರ್, ಪಂಡಿತ ತಾರಾನಾಥ, ಹನುಮಂತಗೌಡ (ಜೀವನ ಚರಿತ್ರೆ), ಡಾ. ಬಾಬಾ ಸಾಹೇಬ ಅಂಬೇಡ್ಕರರ ಬರಹಗಳು, ವಿಜಯನಗರ ಕಾಲದಲ್ಲಿನ ನೀರಾವರಿ ವ್ಯವಸ್ಥೆ (ಅನುವಾದ), ಭಾರತದ ಸಂವಿಧಾನ, ರಾಜ್ಯ ಶಾಸ್ತ್ರ ಮೀಮಾಂಸಕರು, ಸಾರ್ವಜನಿಕ ಆಡಳಿತ (ಪಠ್ಯ ಪುಸ್ತಕಗಳು). ಪಂಡಿತ್ ತಾರಾನಾಥ ಅವರ ಸಮಗ್ರ ಕೃತಿಗಳನ್ನು ಸಂಪಾದಿಸಿದ ಹಿರಿಮೆ ಅವರದು. ...
READ MORE