ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅವರ ನಾಟಕಗಳ ಸಮಗ್ರ ಸಂಕಲನ ‘ಚಂಪಾ ನಾಟಕಗಳು’. 2006ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ, 2012ರಲ್ಲಿ ಮರುಮುದ್ರಣ ಕಂಡಿದೆ. 2017ರಲ್ಲಿ ಮೂರನೇ ಮುದ್ರಣ ಕಂಡಿದೆ. ಲೇಖಕರೇ ಹೇಳುವಂತೆ,’ ಈ ಸಂಪುಟದಲ್ಲಿ ಅಡಕವಾದ ಹನ್ನೊಂದು ನಾಟಕಗಳು ರಚಿತವಾದ ಅವಧಿ: 1968ರಿಂದ 1980. ಅನಂತರ ನಾನು ನಾಟಕ ಬರೆದಿಲ್ಲ. ಅಂತರಂಗದ ರಂಗದ ಮೇಲೆ ಕುಣಿಯುತ್ತಿರುವ ಅನೇಕ ನಾಟಕಗಳು ಥಕ ಥೈ ಎಂದು ಹೊರಗೆ ಧುಮುಕುವುದನ್ನು ನಾನೂ ಕಾಯುತ್ತಿರುವೆ. ನನ್ನ ನಾಟಕಗಳೆಲ್ಲ ನನ್ನನ್ನು ಕಾಡುವ, ಕಾಡುತ್ತಿರುವ ಅನೇಕ ಸಮಸ್‌ಎಗಳಿಗೆ -(ಪರಿಹಾರವನ್ನಲ್ಲ)-ಒಂದು ರೂಪು ಕೊಡಲು ಮಾಡಿದ ಪ್ರಯತ್ನಗಳೇ’ ಎಂದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಕೊಡೆಗಳು, ಅಪ್ಪ, ಕುಂಟಾ ಕುಂಟಾ ಕುರವತ್ತಿ, ಗುರ್‍ತಿನವರು, ಟಿಮಗರ ಬುಡ್ಡಣ್ಣ, ಕತ್ತಲ ರಾತ್ರಿ, ಗೋಕರ್ಣದ ಗೌಡಶಾನಿ, ಜಗದಂಬೆಯ ಬೀದಿ ನಾಟಕ, ಬುರಡಿ ಬಾಬಾನ ಲಕ್ಷಾಪಹರಣ ಪವಾಡ, ನಳಕವಿಯ ಮಸ್ತಕಾಭಿಷೇಕ, ವಂದಿ ಮಾಗಧ ಎಂಬ 11 ನಾಟಕಗಳು ಈ ಕೃತಿಯಲ್ಲಿವೆ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE