ಸಣ್ಣ ಕಥೆಗಾರ, ಕಾದಂಬರಿಕಾರ ಹಾಗೂ ನಾಟಕಗಾರ ಚದುರಂಗ ಅವರ ಕೃತಿ ‘ಚದುರಂಗರ ಸಮಗ್ರ ಕಥೆಗಳು’. ಈ ಸಮಗ್ರ ಕೃತಿಯಲ್ಲಿ ಸ್ವಾರಸ್ಯಕರವಾದ ಒಂಭತ್ತು ಕತೆಗಳಿವೆ. ಕೆ.ನರಸಿಂಹಮೂರ್ತಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.
ಕೃತಿಯ ಪರಿವಿಡಿಯ ಮೊದಲ ಭಾಗದಲ್ಲಿ ಸ್ವಪ್ನ ಸುಂದರಿ ಕಥಾ ಸಂಕಲನದಲ್ಲಿ ಅವರು, ಗುಲಾಬಿ, 1967, ತುಲಸಿ, ಮೂರು ಮತ್ತೊಂದು, ಕೆಂಪುಶಾಯಿ, ಪ್ರಜಾಹೋರಾಟ, ನನ್ನ ಮಗು?, ಸ್ವಪ್ನ ಸುಂದರಿ ಎಂಬ ಕಥೆಗಳಿವೆ. ಶವದ ಮನೆ ಕಥಾ ಸಂಕಲನದಲ್ಲಿ ಶವದ ಮನೆ, ಸಯ್ಯಾಜಿರಾವ್ ರಸ್ತೆ, ಕಾಳಿ, ನಾಲ್ಕು ಮನೆಯ ನಂದಾದೀಪ, ನಿಟ್ಟುಸಿರು, ಬಳೆ ಬೇಕ್ ಬಳೆ, ಇಪ್ಪತ್ತು ರೂಪಾಯಿ, ತು ಜೀಪ್, ತು ದಾಂಡ್, ತು ಬದ್ ರೆಡೀ, ಸತ್ಯ, ಎಂಬ ಕಥೆಗಳಿವೆ. ಇಣಿಕುನೋಟ ಕಥಾ ಸಂಕಲನದಲ್ಲಿ ಇಣಿಕುನೋಟ, ಮರಳಿ ಅಲ್ಲಿಗೆ!!, ಬಣ್ಣದ ಬೊಂಬೆ, ಬರಲು ತಿರುಗುತ್ತಿತ್ತು, ಹೇರ್ ಪಿನ್ ಎಂಬ ಕಥೆಗಳಿವೆ. ಬಂಗಾರದ ಗೆಜ್ಜೆ ಕಥಾ ಸಂಕಲನದಲ್ಲಿ ಬಂಗಾರದ ಗೆಜ್ಜೆ, ಎರಡು ಕಂಠ ಒಂದು ರಾಗ, ಹಣದ ಚೀಲ, ಭೂತದ ಚೇಷ್ಟೆ, ಹೂಮಾಲೆ, ಎಲಾಜೀವನ!, ವ್ಯಾಮೋಹ ಎಂಬ ಕಥೆಗಳಿವೆ. ಮೀನಿನ ಹೆಜ್ಜೆ ಕಥಾ ಸಂಕಲನದಲ್ಲಿ ಮೀನಿನ ಹೆಜ್ಜೆ, ನಾಲ್ಕು ಮೊಳ ಭೂಮಿ, ಅನುಗ್ರಹ, ಕಸ್ತೂರಿ, ನಾನೊಬ್ಬನೆ ಪಾಪಿ!, ರಾತ್ರಿಯಲ್ಲಿ ನಾಟಕ, ಕೊನೆಯ ಅವಕಾಶ, ಹತ್ತು ಲಕ್ಷ ಮೈನಸ್ ಒಂದು ಎಂಬ ಕಥೆಗಳಿವೆ. ಕ್ವಾಟ್ಲೆ ಎಂಬ ಕಥಾಸಂಕಲನದಲ್ಲಿ ಆರುಬೆರಳು, ಪರೀಕ್ಷಿತ, ಒಂದು ಉಂಗುರದ ಕತೆ, ಮೂಗಾಯಣ, ತಿರುವು, ಗಾಳಿ, ಅಂಕ, ಹಂಬಲ, ಜಾದು, ಚಿಟ್ಟೆ ಮತ್ತು ಕಿಟಿಕಿಯ ಗಾಜು, ಗಫೂರ ಹೇಳಿದ ಕಥೆ, ದಬಕ್ ದಬಕ್ ಗುಲ್ಟೋರಿಯೊ ಎಂಬ ಕಥೆಗಳಿವೆ. ಮೃಗಯಾ ಕಥಾಸಂಕಲನದಲ್ಲಿ ಮೃಗಯಾ, ತಲ್ಲಣ, ತೀರ್ಪು, ಕಲ್ಲಿನ ಕೊಳಲು, ಸ್ವಪ್ನ, ಚಾಕೊಲೇಟ್ ಮಾಮ, ಹಿಂದಿರುಗಿದ ಭೂತ, ದಿಬ್ಬ, ಬಸ್ಸಿಂಗ ಇವತ್ತೂ ಬರಲಿಲ್ಲವಾ ಸೇರಿದಂತೆ ಹತ್ತು ಹಲವು ಕಥೆಗಳಿವೆ.
©2024 Book Brahma Private Limited.