ಎರಡು ದಶಕದ ಕಥನ ’ಬಿಸಿಲ ಬಾಗಿನ’ ಕಲಿಗಣನಾಥ ಗುಡದೂರು ಅವರ ನಾಲ್ಕು ಕಥಾ ಸಂಕಲನಗಳ ಸಮಗ್ರ ಕೃತಿಯಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಜನರು ಎದುರುಗೊಳ್ಳುತ್ತಿರುವ ಸವಾಲುಗಳು, ಯಾಂತ್ರೀಕರಣದ ಅಟ್ಟಹಾಸ, ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ಚರ್ಚೆ ಈ ಕೃತಿಯಲ್ಲಿದೆ. ಮಾನವೀಯ ಮೌಲ್ಯ, ನೆಲದ ಸಂಸ್ಕೃತಿಯ ಸಂಸ್ಕಾರವನ್ನು ಉಸಿರಾಗಿಸಿಕೊಂಡಿರುವ ಲೇಖಕರ ಕತೆಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಉತ್ತರ ಕರ್ನಾಟಕ ಶೈಲಿಯ ಭಾಷಾ ಬರವಣಿಗೆ ತನ್ನ ಸುತ್ತ ಮುತ್ತಲಿನ ಪರಿಸರದಲ್ಲಿ ಲೇಖಕರು ಕಂಡುಂಡ ನೋವು-ನಲಿವು, ಹೋರಾಟ, ಸಂಕಟ ಎಲ್ಲವನ್ನು ಕತೆಗಳಾಗಿ ದಾಖಲಿಸಿದ್ದಾರೆ.
ಉಡಿಯಲ್ಲಿಯ ಉರಿ, ಮತಾಂತರ, ಮಾಮೂಲಿ ಗಾಂಧಿ, ತೂತು ಬೊಟ್ಟು ಕಥಾ ಸಂಕಲನದಲ್ಲಿನ ಹಲವು ಕಥೆಗಳು ಇಲ್ಲಿವೆ. ಲೇಖಕರ ಬರಹಗಳ ಬಗ್ಗೆ ರಹಮತ್ ತರೀಕೆರೆ ಅವರು ವಿವರಿಸುತ್ತಾ ರೂಪಕದ ಭಾಷೆಯಲ್ಲಿ ಕತೆಗಳನ್ನು ಕಟ್ಟುತ್ತಿದ್ದಾರೆ ಕಲಿ. ಅವರದು ನೇರವಾದ ಮತ್ತು ಪ್ರಾಮಾಣಿಕವಾದ ಗ್ರಾಮೀಣ ಮುಗ್ಧತೆಯ ಮನಸ್ಸು. ಬಹುಶಃ ಗಾಯಗೊಂಡಂತಿರುವ ಮನೋಸ್ಥಿತಿಯಲ್ಲಿ ಅವರು ಕತೆ ಬರೆಯುತ್ತಾರೆ ಎಂದಿದ್ದಾರೆ. ಇದು ಲೇಖಕರ ಬರಹ ಶೈಲಿ, ಭಾವನೆಗಳ ಕುರಿತಾಗಿ ವಿವರಿಸುತ್ತದೆ.
©2024 Book Brahma Private Limited.