ಸಸ್ಯಶಾಸ್ತ್ರಜ್ಞರಾದ ಬಿಜಿಎಲ್ ಸ್ವಾಮಿ ಅವರಿಗೆ ಬಾಲ್ಯದಿಂದಲೂ ಇತಿಹಾಸ, ಸಂಸ್ಕೃತಿ, ಪುರಾಣ, ಸಾಹಿತ್ಯ, ಮಾನವಶಾಸ್ತ್ರ, ಮನಃಶಾಸ್ತ್ರದ ಆಳವಾದ ಪರಿಚಯ ಇತ್ತು. ಅವರ ತಂದೆ ’ಮಂಕುತಿಮ್ಮನ ಕಗ್ಗ’ ಬರೆದ ಡಿ.ವಿ.ಗುಂಡಪ್ಪ. ಅಲ್ಲದೆ ಸ್ವಾಮಿ ಅವರಿಗೆ ಆ ಪ್ರಭಾವಳಿಯಿಂದ ಹೊರಬಂದ ಸ್ವೋಪಜ್ಞವಾದ ಪ್ರತಿಭೆ ಇತ್ತು. ಅದೆಲ್ಲದರ ಫಲ ಅವರ ಸಾಹಿತ್ಯ ಕೃಷಿ.
ಹಸಿಮೆಣಸನ್ನು ಓದುಗರಿಗೆ ಪರಿಚಯಿಸುತ್ತಲೇ ಮನುಷ್ಯನ ಹುಸಿತನವನ್ನು ಬಯಲುಗೊಳಿಸುವ, ಟೊಮೆಟೊದೊಂದಿಗೆ ತಾತ್ವಿಕತೆಯನ್ನು ಹೇಳುವ, ಅಕಾಡೆಮಿಕ್ ವಲಯದಲ್ಲಿ ಇರುತ್ತಲೇ ಅಲ್ಲಿಂದ ತಪ್ಪಿಸಿಕೊಳ್ಳುವ ವಿಶಿಷ್ಟ ಮನಸ್ಥಿತಿಯೊಂದು ಅವರಿಗೆ ಸಿದ್ಧಿಸಿತ್ತು.
ಅವರ ಸಾಹಿತ್ಯವನ್ನು ರಸ-ರುಚಿ ಎಂದು ಭಿನ್ನವಾಗಿ ಕರೆದು ಓದುಗರಿಗೆ ’ಉಣಬಡಿಸಿದ್ದಾರೆ’ ಟಿ.ಆರ್. ಅನಂತರಾಮು.
ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ. ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ...
READ MORE