ಲೇಖಕ ರಾಜಶೇಖರ ಹೆಬ್ಬಾರ ಅವರ `ಬಿ.ಎಚ್ ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ- 6 ಅನುವಾದ-2’ ಕೃತಿಯು ಬಿ.ಎಚ್. ಶ್ರೀಧರ ಅವರ ಸಾಹಿತ್ಯ ಬದುಕಿನ ಚಿತ್ರಣವಾಗಿದೆ. ಶ್ರೀಧರರ ಬರಹಗಳಲ್ಲಿ ಎದ್ದು ಕಾಣುವ ಮುಖ್ಯ ಅಂಶವೆಂದ’ರೆ ಭಾರತೀಯತೆಯಲ್ಲಿ ಅಚಲ ವಿಶ್ವಾಸ ಮತ್ತು ಅದರ ಅಧಿಕಾರಯುತ ಪ್ರತಿಪಾದನೆ ಮೂಲಭೂತವಾದ ಮತ್ತು ಪಾಶ್ಚಾತ್ಯೀಕರಣದ ಅತಿರೇಖೆಗಳ ನಡುವೆ ಅವರು ಒಂದು ಮಧ್ಯಮ ಮಾರ್ಗ ಕಂಡುಕೊಂಡಿದ್ದರು. ಭಾರತ ಎಂಬುದು ಅವರಿಗೆ ಕೇವಲ ಭೌಗೋಳಿಕ/ ರಾಜಕೀಯ ನಕಾಶೆ ಆಗಿರಲಿಲ್ಲ. ಒಂದು ಜೀವನ ದರ್ಶನವಾಗಿತ್ತು. ಅವರ ಸೂತ್ರತ್ರಯಗಳಲ್ಲಿ ಇದು ಮಂಡಿಸಲ್ಪಟ್ಟಿವೆ. ಇವರ ಹಿನ್ನೆಲೆಯಲ್ಲಿ, ಪ್ರಾಚೀನ ಭಾರತದ ಮೂವರು ಸೂತ್ರಕಾರರಿದ್ದಾರೆ. ಭರತ ಮತ್ತು ವ್ಯಾಸ. ಇವರ ಸರ್ವಕಾಲಿಕ ಶ್ರೇಷ್ಠತೆ, ಪ್ರಸ್ತುತತೆಗಳ ಬಗ್ಗೆ ಅವರಿಗೆ ಯಾವುದೇ ಅನುಮಾನವಿರಲಿಲ್ಲ. ಪಾಣಿನಿಯನ್ನು ಸ್ಮರಿಸದ ಧ್ವನಿಶಾಸ್ತ್ರ, ಭಾಷಾಶಾಸ್ತ್ರ, ಭರತನನ್ನು ಮೆಚ್ಚದ ಸಾಹಿತ್ಯ, ಸಿದ್ದಾಂತ, ವಿಮರ್ಶೆ, ವ್ಯಾಸರ ಶಾಂತಿಪರ್ವಕ್ಕೆ ಮನ್ನಣೆ ನೀಡಿದ ರಾಜ್ಯಶಾಸ್ತ್ರ ಇವು ಅವರಿಗೆ ದ್ರೋಹವಾಗಿ, ವಿದ್ರೋಹವಾಗಿ ಕಾಣುತ್ತಿದ್ದವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.