ಲೇಖಕ ರಾಜಶೇಖರ ಹೆಬ್ಬಾರ ಅವರ `ಬಿ.ಎಚ್ ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ’ ಕೃತಿಯು ಬಿ.ಎಚ್. ಶ್ರೀಧರ ಅವರ ಸಾಹಿತ್ಯ ಬದುಕಿನ ಚಿತ್ರಣವಾಗಿದೆ.ಇಲ್ಲಿ ಲೇಖಕರು ಬಿ.ಎಚ್. ಶ್ರೀಧರರ ಸ್ವಭಾವ- ಸಂಬಂಧಗಳನ್ನು ಎತ್ತಿ ತೋರುವ ಒಂದೆರಡು ನಿದರ್ಶನಗಳನ್ನು ನೀಡಿದ್ದಾರೆ. ಬೇಂದ್ರೆಯವರ ಕನ್ನಡ ಮೇಘದೂತ ಮೊದಲನೇ ಪದ್ಯದಲ್ಲಿ ’ಶಪಿತ ವರುಷವನು’ ಎಂಬ ಪದಪ್ರಯೋಗವಿದ್ದು, ಶಪಿತ ಎಂಬುದು ಅಪಾಣೀಯ ‘ಶಪ್ತ’ ಎಂದಾಗಬೇಕು ಎಂದು ಹೇಳಿದರಂತೆ. ಶಿವರಾಮ ಕಾರಂತರ ಕಾದಂಬರಿಯೊಂದರಲ್ಲಿ ‘ಏನಕೇನ ಪ್ರಕಾರೇಣ’ ಎಂಬ ಪದವಿದ್ದು ‘ಏನಕೇನ’ ತಪ್ಪು ‘ಯೇನ ಕೇನ’ ಎಂದಾಗಬೇಕು ಅಂದರಂತೆ. ಆ ಹಿರಿಯರಿಬ್ಬರೂ ಬಾಲದಾಫಿ ಸುಭಾಷಿತಂ ಎಂದು ಶ್ರೀಧರನ್ನು ಒಪ್ಪಿಕೊಂಡರಂತೆ. ಇವರ ಧೈರ್ಯ ಅವರ ಔದಾರ್ಯ ಎರಡೂ ಮೆಚ್ಚಬೇಕಾದ್ದೇ. ಈ ಘಟನೆಗಳಿಂದ ಅವರ ಸಂಬಂಧಗಳು ಹಾಳಾಗಲಿಲ್ಲ ಎಂಬುದು ಮುಖ್ಯ ಲಿಪಿದೋಷ, ವ್ಯಾಕರಣ ದೋಷ ಮುಖ್ಯವೇನಲ್ಲ ಎಂಬುದು ಇಲ್ಲಿ ವಿಶ್ಲೇಷಿತವಾಗಿದೆ. ಜೀವನದ ನಾಟ್ಯ ಶಾಲೆಯಲ್ಲಿ ಶ್ರೀಧರರು ಪಾಲ್ಗೊಂಡ ವರನ್ನಾದೂಟ, ಗುಮಾಸ್ತಗಿರಿ, ಪತ್ರಿಕಾ ವೃತ್ತಿ, ಆಡಳಿತ ನಿರ್ವಹಣೆ, ಶಾಸ್ತ್ರ ಸಾಹಿತ್ಯ ರಚನೆ, ಇತಿಹಾಸ, ಸಂಶೋಧನೆ ಹೀಗೆ ಈ ಎಲ್ಲ ವಿಚಾರ ಕುರಿತ ಲೇಖನಗಳು ಒಳಗೊಂಡಿವೆ..
©2024 Book Brahma Private Limited.