ಬಿ.ಎಚ್.ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-3 ವಿಚಾರ

Author : ರಾಜಶೇಖರ ಹೆಬ್ಬಾರ

Pages 1044

₹ 680.00




Year of Publication: 2014
Published by: ತೇಜು ಪಬ್ಲಿಕೇಷನ್ಸ್
Address: #233, 7ನೇ ‘ಎ’ ಅಡ್ಡರಸ್ತೆ, ಶಾಸ್ತ್ರಿನಗರ, ಬೆಂಗಳೂರು-560028

Synopsys

ಲೇಖಕ ರಾಜಶೇಖರ ಹೆಬ್ಬಾರ ಅವರ `ಬಿ.ಎಚ್ ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ- 3 ವಿಚಾರ’ ಕೃತಿಯು ಬಿ.ಎಚ್. ಶ್ರೀಧರ ಅವರ ಸಾಹಿತ್ಯ ಬದುಕಿನ ಚಿತ್ರಣವಾಗಿದೆ. ಐದು ಸಂಪುಟಗಳಲ್ಲಿ ಶ್ರೀಧರರ ಎಲ್ಲ ಕೃತಿಗಳು ಆಯಾ ಪ್ರಕಾರಗಳಿಗೆ ಅನುಗುಣವಾಗಿ ಬರುತ್ತಿವೆ. ಕಾವ್ಯ, ವಿಮರ್ಶೆ, ಅನುವಾದ, ವಿಚಾರ ಸಂಕೀರ್ಣ ಎಂಬುದಾಗಿ ಶ್ರೀಧರರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದರೂ ಅವರದು ಮೂಲಭೂತವಾಗಿ ಸವಿಸತ್ವ ಲೋಕಕ್ಕೆ ಅವರ ಪದಾರ್ಪಣವಾಗಿದ್ದೇ ಕವಿತೆಯಿಂದ.

ಬಿ.ಎಚ್ ಶ್ರೀಧರರ ಎಲ್ಲ ಕೃತಿಗಳಲ್ಲೂ ಸಮಾಜದ ಸದೃಡತೆಗೆ ಅನಿವಾರ್ಯವಾದ ಮತ್ತು ಅತ್ಯವಶ್ಯವಾದ ಈ ನೈತಿಕತೆಯ ಅಂತಃಸೂತ್ರ ಅಭಿವ್ಯಕ್ತಿ ಖಚಿತವಾಗಿ ಮತ್ತು ಪ್ರಬಲವಾಗಿ ಪಡಿಮೂಡಿದೆ. ಹೀಗಾಗಿ, ಅವು ಇಂದಿಗೂ ಎಂದಿಗೂ ಸಲ್ಲುವಂಥವುಗಳೆಂಬ ವಿಚಾರವೇ ಅವುಗಳ ಪುನರ್ಮುದ್ರಣಕ್ಕೆ ಪ್ರೇರಣೆಯಾಗಿದೆ.

About the Author

ರಾಜಶೇಖರ ಹೆಬ್ಬಾರ

ಲೇಖಕ ರಾಜಶೇಖರ ಹೆಬ್ಬಾರ ಅವರು ಮೂಲತಃ ಉಡುಪಿಯವರು. ಕೃತಿಗಳು: ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-2 ವಿಮರ್ಶೆ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-3 ವಿಚಾರ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-4 ಸಂಕೀರ್ಣ, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-5 ಅನುವಾದ- 1, ಬಿ.ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-6 ಅನುವಾದ-2 ...

READ MORE

Related Books