ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ ಮೊದಲಾದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ ಷಣ್ಮುಗಯ್ಯ ಅಕ್ಕೂರಮಠ ಅವರ ಸಮಗ್ರ ವೀರಶೈವ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಬರೆದ ಲೇಖನಗಳ ಸಂಗ್ರಹ ಈ ಇದಾಗಿದೆ. “ಅರಿದವರ ಚರಣಾಂಬುಜಕೆ ವೀರಶೈವ ಸಿದ್ದಾಂತ ಮತ್ತು ಅನುಭಾವ, ಲಿಂಗಾಂಗ ಸಾಮರಸ್ಯ ಪರಿಕಲ್ಪನೆ, ಇಷ್ಟಲಿಂಗ ದೀಕ್ಷೆ, ಶಿವಯೋಗದ ನೆಲೆ-ಹಿನ್ನೆಲೆ, ವೀರಶೈವ ಸಂಸ್ಕಾರಗಳು, ವೀರಶೈವ ಪುರಾಣಗಳ ಸೃಷ್ಟಿ ಮತ್ತು ದೃಷ್ಟಿ, ವೀರಶೈವರ ಅಪ್ರಾಕೃತ ಜಗತ್ ಸೃಷ್ಟಿಯ ಮೌಲಿಕತೆ, ಶೈವೋಪನಿಷತ್ತುಗಳಲ್ಲಿ ವೀರಶೈವ ದರ್ಶನ, ವೀರಶೈವ ಚರಮಗೀತೆ: ಒಂದು ಚಿಂತನ, ವೀರಶೈವ ಗೋತ್ರ-ಸೂತ್ರಗಳ ಪರಿಕಲ್ಪನೆ, ವೀರಶೈವ ಧಾರ್ಮಿಕ ಆಚರಣೆಯಲ್ಲಿ ಕಂಡುಬರುವ ಅಸಂಗತಗಳು, ಜಂಗಮರು ಒಂದು ಅವಲೋಕನ” ಮುಂತಾದ 48ಕ್ಕೂ ಹೆಚ್ಚು ಲೇಖನಗಳನ್ನು ಇಲ್ಲಿ ಕಾಣಬಹುದು.
ಷಣ್ಮುಗಯ್ಯ ಅಕ್ಕೂರಮಠ ಅವರು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕು, ಬೂದಿಹಾಳ ಗ್ರಾಮದಲ್ಲಿ 1939 ಆಗಸ್ಟ್ 23ರಂದು ಜನಿಸಿದರು. ತಂದೆ ವೀರಪ್ಪಯ್ಯ ಶಾಸ್ತ್ರಿ ಅಕ್ಕೂರಮಠ, ತಾಯಿ ಬಸವಲಿಂಗಾಂಬೆ. ಸಂಸ್ಕೃತದಲ್ಲಿ ಅಪಾರ ಆಸಕ್ತಿ ತಳೆದಿದ್ದರು. ಸಂಸ್ಕೃತ ಸಾಹಿತ್ಯ, ಕಾವ್ಯ, ಚಂಪೂಕಾವ್ಯ, ನಾಟಕಗಳು, ಛಂದಸ್ಸು, ವ್ಯಾಕರಣ, ತರ್ಕ ಮೊದಲಾದ ವಿಷಯಗಳ ಅಧ್ಯಯನ ಮಾಡಿದರು. ಸ್ನಾತಕೋತ್ತರ ಪದವೀಧರರು. 1970ರಲ್ಲಿ ಪ್ರಯಾಗ ವಿಶ್ವವಿದ್ಯಾನಿಲಯದ (ಉತ್ತರ ಪ್ರದೇಶ)ದಿಂದ ಸಾಹಿತ್ಯರತ್ನವನ್ನೂ ಪಡೆದರು. 1983ರಲ್ಲಿ ಮೈಸೂರು ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಸಂಸ್ಥೆಯಿಂದ ಬಿ.ಎಡ್., ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಆರೂಢ ಸಂಪ್ರದಾಯದ ಸದ್ಗುರು ಬಾಬಾ ಪ್ರಶಸ್ತಿ, ಶಿವಕಮಲ ಸಾಹಿತ್ಯ ಪ್ರಶಸ್ತಿ, ...
READ MORE