ಶಶಿಕಲಾಗೌಡ ಎಂ.ಎಸ್., ಎಂ.ಎ., ರಾಷ್ಟಭಾಷಾ ಪ್ರವೀಣ್, ಡಿ.ಫಾರ್ಮಾ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ 12-10-1969ರಂದು ಜನಿಸಿದರು.
ಇವರ ಕೃತಿಗಳು: ಎ.ಕೆ. ಸುಬ್ಬಯ್ಯ (ಜೀವನ ಚರಿತ್ರೆ-ಪ್ರತಿಭಾವಂತ ಸಂಸದೀಯ ಪಟುಗಳ ಮಾಲಿಕೆ) ಗಾಂಧಾರಿ (ಕೋಮಲ್ ಗಾಂಧಾರ್ ನಾಟಕದ ಅನುವಾದ ಹಿಂದಿಯಿಂದ) ಕೃತಿ ಪ್ರಕಟವಾಗಿದೆ.
ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡಕ್ಕೆ ಕನ್ನಡದಿಂದ ಇಂಗ್ಲಿಷಿಗೆ ಕೃತಿಗಳ ಅನುವಾದ ಕೆಲಸವನ್ನು ಮಾಡಿದ್ದಾರೆ. ವಸಂತ ಬಿರುಗಾಳಿ ಎಂಬ ಅಸ್ಸಾಮಿ ಮೂಲದ ಕನ್ನಡ ಅನುವಾದ ನಾಟಕ ರಾಷ್ಟ್ರೀಯ ನಾಟಕ ಮಾಲಿಕೆಯಲ್ಲಿ ಪ್ರಸಾರವಾಗಿದೆ. ನಾಟಕ ರಚನೆ, ಅಭಿನಯ, ವಸ್ತ್ರವಿನ್ಯಾಸ ಇತ್ಯಾದಿಯಲ್ಲಿ ಸಕ್ರಿಯರು. ಚಂದನವಾಹಿನಿಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
1998ರಿಂದಲೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಐದು ಸ್ವರ್ಣ, ರಜತ, 4 ಕಂಚಿನ ಪದಕ ಗಳಿಕೆ, ಪದ್ಮಶ್ರೀ ಕಲಾ ಶಾರದೆ, ಪದ್ಮಶ್ರೀ ಕಲಾರತ್ನ, ಕನ್ನಡ ಕುಸುಮ, ಬೆಂಗಳೂರು ರತ್ನ ಮೊದಲಾದ ಮನ್ನಣೆ ಇವರಿಗೆ ದೊರೆತಿದೆ.