ಪೀಟರ್ ವ್ಯಾಟ್ಸನ್ ಬರೆದಿರುವ `ಐಡಿಯಾಸ್’ ಕೃತಿಯನ್ನು ಆಧರಿಸಿದ ಸಂಗ್ರಹರೂಪ. ಇದು ವಿವಿಧ ವಿದ್ವಾನ್ ಕ್ಷೇತ್ರಗಳಲ್ಲಿ ನಡೆದಿರುವ ಸಂಶೋಧನೆ, ಚರ್ಚೆಗಳನ್ನು ಆಧಾರವಾಗಿಟ್ಟುಕೊಂಡು ಆಧುನಿಕ ಮನುಷ್ಯನನ್ನು ತಿದ್ದಿ ರೂಪಿಸುವ ಆಧುನಿಕ ಮನುಷ್ಯನ ಮನಸ್ಸು ಭಾವನೆ, ಕ್ರಿಯೆ ವಿಚಾರಗಳನ್ನು ಪ್ರಭಾವಿಸಿರುವ ಸಂಗತಿಗಳನ್ನು ಕುರಿತದ್ದು. ಪಾಶ್ಚಾತ್ಯ ದೇಶಗಳಲ್ಲಿ ಆದ ಬೆಳವಣಿಗೆ ಏಶಿಯಾದ ದೇಶಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲ, ಯಾವ ವಿಚಾರಗಳು ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಗತಿಗಳು ಜಗತ್ತಿನ ಪಲ್ಲಟಗಳಿಗೆ ಕಾರಣವಾಗಿದೆ ಎನ್ನುವುದರ ಚಿತ್ರಣ ಭಾರತ, ಚೀನಾ ಮತ್ತು ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳು ಯುರೋಪಿಗಿಂತ ಹಲವು ಸಂಗತಿಗಳಲ್ಲಿ ಮುಂದಿದ್ದರೂ ಏಕೆ ಹಿಂದೆ ಬಿದ್ದವು ಎನ್ನುವ ಪರಿಶೀಲನೆಯನ್ನು ಭಾಷೆಯ ಉಗಮಕ್ಕಿಂತ ಮುಂಚಿನ ವಿಚಾರಗಳು, ಭಾಷೆಯ ಉಗಮ, ವಿಜ್ಞಾನ, ತತ್ವಶಾಸ್ತ್ರ ಮತ್ತು ಮಾನವಿಕಗಳ ಉಗಮ, ಇಸ್ರೇಲ್ ಮತ್ತು ಜೀಸಲ್ ಎಂಬ ಪರಿಕಲ್ಪನೆಗಳು ಸಂಸ್ಕೃತ, ವೇದಾಂತ ಹಿಂದೂ ಅಂಕಿಗಳು, ಚರ್ಚಿನ ವಿಚಾರ ನಿಯಂತ್ರಣಗಳು, ಪುನರುಜ್ಜೀವನ ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿದೆ.
©2024 Book Brahma Private Limited.